×
Ad

ಅಹಮದಾಬಾದ್ ನಲ್ಲಿ ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯ: ಗಗನಕ್ಕೇರಿದ ವಿಮಾನದ ಟಿಕೆಟ್ ದರ

Update: 2023-09-22 15:34 IST

Photo: Twitter

ಹೊಸದಿಲ್ಲಿ: ಅಹಮದಾಬಾದ್ ನಲ್ಲಿ 2023 ರ ಐಸಿಸಿ ಕ್ರಿಕೆಟ್ ವಿಶ್ವಕಪ್ ನಲ್ಲಿ ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ಮುಖಾಮುಖಗೆ ದಿನಗಣನೆ ಆರಂಭವಾಗಿರುವಂತೆಯೇ ಕ್ರಿಕೆಟ್ ಅಭಿಮಾನಿಗಳಿಗೆ ಜೇಬು ಬರಿದಾಗುತ್ತಿರುವ ಅನುಭವವಾಗುತ್ತಿದೆ

ಹೋಟೆಲ್ ಗಳಲ್ಲಿ ಕೊಠಡಿ ಗಿಟ್ಟಿಸುವುದು ಅಸಾಧ್ಯವಾಗಿರುವಾಗಲೇ ವಿಮಾನ ದರಗಳಲ್ಲಿ ಭಾರೀ ಏರಿಕೆ ಮಾಡಲಾಗಿದೆ.

ಭಾರತ ಹಾಗೂ ಪಾಕ್ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕೇವಲ 25 ದಿನಗಳು ಬಾಕಿ ಇರುವಾಗ, ದೇಶದ ಮೂಲೆ ಮೂಲೆಗಳಿಂದ ಅಹಮದಾಬಾದ್ ಗೆ ಆಗಮಿಸುವ ವಿಮಾನಗಳ ಬೆಲೆಗಳು ರಾಕೆಟ್ನಂತೆ ಏರಿಕೆಯಾಗಿವೆ. ಟಿಕೆಟ್ ದರ 415 ಪ್ರತಿಶತದಷ್ಟು ಗಗನಕ್ಕೇರಿ ಕ್ರಿಕೆಟ್ ಅಭಿಮಾನಿಗಳಿಗೆ ಕಣ್ಣೀರು ತರಿಸುತ್ತಿದೆ.

ಚಂಡೀಗಢ, ಜೈಪುರ, ಲಕ್ನೋ, ಮುಂಬೈ, ದಿಲ್ಲಿ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು, ಹೈದರಾಬಾದ್, ಪಾಟ್ನಾ, ಭೋಪಾಲ್, ಭುವನೇಶ್ವರ, ಪುಣೆ ಮತ್ತು ಹೆಚ್ಚಿನ ಸ್ಥಳಗಳಿಂದ ವಿಮಾನಗಳಿಗೆ 25-30 ದಿನಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ದೂರದೃಷ್ಟಿ ಇದ್ದವರು. ಒಂದು ರೌಂಡ್ ಟ್ರಿಪ್ ಗೆ ಪ್ರತಿ ವ್ಯಕ್ತಿಗೆ ರೂ 5,500 ರಿಂದ ರೂ 12,000 ವರೆಗಿನ ದರ ಪಾವತಿಸಿದ್ದಾರೆ.

ಪಂದ್ಯದ ದಿನಗಳಲ್ಲಿ ಅಹಮದಾಬಾದ್ ಗೆ ಭೇಟಿ ನೀಡಲು ಯೋಜಿಸುವುದು ಖಂಡಿತವಾಗಿಯೂ ದುಬಾರಿಯಾಗುತ್ತದೆ.. ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಇಲ್ಲಿನ ಕೆಲವು ಹೋಟೆಲ್ ಗಳು ಪ್ರತಿ ರಾತ್ರಿಗೆ ರೂ 80,000 ರಂತೆ ಶುಲ್ಕ ವಿಧಿಸುವುದನ್ನು ನಾವು ಕೇಳಿದ್ದೇವೆ. ಸೀಮಿತ ವಿಮಾನಗಳು ಲಭ್ಯವಿದ್ದು, ವಿಮಾನ ದರಗಳು ಹೆಚ್ಚಾಗುವುದರಲ್ಲಿ ಆಶ್ಚರ್ಯವಿಲ್ಲ ”ಎಂದು ಸ್ಥಳೀಯ ಟ್ರಾವೆಲ್ ಆಪರೇಟರ್ ಪ್ರತಿಕ್ರಿಯಿಸಿದ್ದಾರೆ.

ಕುತೂಹಲಕಾರಿ ಅಂಶವೆಂದರೆ ವಿಮಾನ ದರಗಳಲ್ಲಿನ ಈ ಏರಿಕೆಯು ಆರಂಭಿಕ ಪಂದ್ಯ, ಅರ್ಹತಾ ಪಂದ್ಯಗಳು ಅಥವಾ ಫೈನಲ್ ಸೇರಿದಂತೆ ಇತರ ಪಂದ್ಯಗಳಿಗೆ ಅನ್ವಯಿಸುತ್ತಿಲ್ಲ. ಟ್ರಾವೆಲ್ ಆಪರೇಟರ್ ಗಳು ಈಗ ಹೆಚ್ಚುವರಿ ವಿಮಾನಗಳನ್ನು ಸೇರಿಸುವುದನ್ನು ಪರಿಗಣಿಸುವಂತೆ ಏರ್ಲೈನ್ಗಳಿಗೆ ಮನವಿ ಮಾಡುತ್ತಿದ್ದಾರೆ.

''ಅಭಿಮಾನಿಗಳು, ಬೆಂಬಲಿಗರು, ಪ್ರಾಯೋಜಕರು ಹಾಗೂ ಪತ್ರಕರ್ತರು ಸೇರಿದಂತೆ ಪ್ರಪಂಚದಾದ್ಯಂತದ ಜನರು ಭಾರತ-ಪಾಕ್ ಪಂದ್ಯ ವೀಕ್ಷಿಸಲು ಬರುತ್ತಾರೆ. ಈ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಅಕ್ಟೋಬರ್ 13-16 ರಿಂದ ಹೆಚ್ಚಿನ ವಿಮಾನಗಳನ್ನು ಕಾರ್ಯಗತಗೊಳಿಸಲು ಏರ್ಲೈನ್ ಗಳು ಗಂಭೀರವಾಗಿ ಯೋಚಿಸಬೇಕು, ಅಹಮದಾಬಾದ್ ಗೆ ಪ್ರಯಾಣಿಸುವ ಹಾಗೂ ಅಲ್ಲಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಯೋಜನವನ್ನು ಖಾತ್ರಿಪಡಿಸಿಕೊಳ್ಳಬೇಕು ”ಎಂದು ಗುಜರಾತ್ನ ಟ್ರಾವೆಲ್ ಏಜೆಂಟ್ಸ್ ಮತ್ತು ಟೂರ್ ಆಪರೇಟರ್ಸ್ ಅಸೋಸಿಯೇಶನ್ (TAG) ಅಧ್ಯಕ್ಷ ಅನುಜ್ ಪಾಠಕ್ ಒತ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News