ಇಂಡಿಯನ್ ರೇಸಿಂಗ್ ಫೆಸ್ಟಿವಲ್ | ಕೋಲ್ಕತ್ತಾ ರಾಯಲ್ ಟೈಗರ್ಸ್ ತಂಡವನ್ನು ಖರೀದಿಸಿದ ಸೌರವ್ ಗಂಗುಲಿ
ಸೌರವ್ ಗಂಗುಲಿ | PC : X
ಹೊಸದಿಲ್ಲಿ: ಈ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ನಡೆಯಲಿರುವ ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನಲ್ಲಿ ಕೋಲ್ಕತ್ತಾ ರಾಯಲ್ ಟೈಗರ್ಸ್ ತಂಡವನ್ನು ಗುರುವಾರ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗುಲಿ ಖರೀದಿಸಿದ್ದಾರೆ.
ಚೊಚ್ಚಲ ಬಾರಿಗೆ ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನಲ್ಲಿ ಭಾಗವಹಿಸುತ್ತಿರುವ ಕೋಲ್ಕತ್ತಾ ರೇಸಿಂಗ್ ತಂಡದ ಹೊರತಾಗಿ ಹೈದರಾಬಾದ್, ಬೆಂಗಳೂರು, ಚೆನ್ನೈ, ದಿಲ್ಲಿ, ಗೋವಾ, ಕೊಚ್ಚಿ ಹಾಗೂ ಅಹಮದಾಬಾದ್ ಮೂಲದ ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿವೆ.
ಈ ರೇಸಿಂಗ್ ಫೆಸ್ಟಿವಲ್ ಎರಡು ಪ್ರಮುಖ ಕ್ರೀಡಾಕೂಟಗಳಾದ ಇಂಡಿಯನ್ ರೇಸಿಂಗ್ ಲೀಗ್ ಹಾಗೂ ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಶಿಪ್ ಅನ್ನು ಒಳಗೊಳ್ಳಲಿದೆ.
ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನೊಂದಿಗೆ ಗುರುತಿಸಿಕೊಂಡಿರುವು ರೋಮಾಂಚನಕಾರಿ ಅನುಭವ ಎಂದ ಬಿಸಿಸಿಐ ಮಾಜಿ ಅಧ್ಯಕ್ಷರೂ ಆದ ಸೌರವ್ ಗಂಗುಲಿ, "ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನಲ್ಲಿ ಕೋಲ್ಕತ್ತಾ ತಂಡದೊಂದಿಗೆ ನನ್ನ ಪಯಣ ಆರಂಭಿಸಿರುವುದರಿಂದ ನಿಜಕ್ಕೂ ವಿಶೇಷ ಅನುಭವ" ಎಂದು ಹೇಳಿಕೊಂಡಿದ್ದಾರೆ.
ಇದಕ್ಕೂ ಮುನ್ನ, ಭಾರತದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಗ್ಲೋಬಲ್ ಚೆಸ್ ಲೀಗ್‌ನ ಎರಡನೆ ಆವೃತ್ತಿಯಲ್ಲಿ ಅಮೆರಿಕ ಗ್ಯಾಂಬಿಟ್ಸ್ ತಂಡದ ಸಹ ಮಾಲಕರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.