ಐಪಿಎಲ್: ಸೂರ್ಯಕುಮಾರ್ ಫಿಟ್ನೆಸ್ ಬಗ್ಗೆ ಮುಂಬೈ ಇಂಡಿಯನ್ಸ್ ಕಳವಳ
ಸೂರ್ಯಕುಮಾರ್ ಯಾದವ್ | Photo: X
ಮುಂಬೈ: ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಸೂರ್ಯಕುಮಾರ್ ಯಾದವ್ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಿಗೆ ಲಭ್ಯವಾಗುವ ಕುರಿತಂತೆ ಮುಂಬೈ ಇಂಡಿಯನ್ಸ್ ತೀವ್ರ ಕಳವಳಗೊಂಡಿದೆ.
ಸ್ಪೋರ್ಟ್ಸ್ ಹರ್ನಿಯಾ ಗಾಯದಿಂದ ಬಳಲುತ್ತಿದ್ದ ಸೂರ್ಯಕುಮಾರ್ ಸರ್ಜರಿಗೆ ಒಳಗಾಗಿದ್ದು, ಡಿಸೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯ ನಂತರ ಸಕ್ರಿಯ ಕ್ರಿಕೆಟ್ ನಿಂದ ದೂರ ಉಳಿದಿದ್ದಾರೆ.
ವಿಶ್ವದ ನಂ.1 ಟಿ-20 ಬ್ಯಾಟರ್ ಸೂರ್ಯಕುಮಾರ್ ಸದ್ಯ ಬೆಂಗಳೂರಿನ ಎನ್ ಸಿ ಎನಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ್ದಾರೆ.
ಅವರು ನೆಟ್ ಗಳಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ನಾಳೆ(ಮಂಗಳವಾರ)ಅವರು ಮೊದಲ ಓಪನ್ ನೆಟ್ ನಲ್ಲಿ ಭಾಗವಹಿಸಲಿದ್ದಾರೆ. ಅವರು ಕೆಲವು ಫೀಲ್ಡಿಂಗ್ ಕಸರತ್ತನ್ನು ನಡೆಸಿದರು. ಅವರ ದೇಹ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಆಧರಿಸಿ ಬಿಸಿಸಿಐನ ವೈದ್ಯಕೀಯ ತಂಡವು ಅವರು ಕ್ರಿಕೆಟಿಗೆ ಮರಳಲು ಅಗತ್ಯವಿರುವ ಫಿಟ್ನೆಸ್ ಅನ್ನು ಪರಿಶೀಲಿಸಲಿದೆ ಎಂದು ಮೂಲಗಳು ತಿಳಿಸಿವೆ.
ಮುಂಬೈ ಇಂಡಿಯನ್ಸ್ ಅಹ್ಮದಾಬಾದ್ ನಲ್ಲಿ ಮಾರ್ಚ್ 24ರಂದು ಗುಜರಾತ್ ಟೈಟಾನ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಮುಂಬೈ ಇಂಡಿಯನ್ಸ್ ನಿಂದ ಹರಾಜಿನಲ್ಲಿ 4.8 ಕೋಟಿ ರೂ.ಗೆ ಖರೀದಿಸಲ್ಪಟ್ಟಿರುವ ಶ್ರೀಲಂಕಾದ ವೇಗಿ ನುವಾನ್ ತುಷಾರ ಹಾಗೂ ನೂತನ ಬೌಲಿಂಗ್ ಲಸಿತ್ ಮಾಲಿಂಗ ಅವರ ಬೌಲಿಂಗ್ ಶೈಲಿ ಒಂದೇ ರೀತಿ ಇದೆ. ಈ ಇಬ್ಬರು ಒಂದೇ ದೇಶದಿಂದ ಬಂದಿದ್ದಾರೆ. ನುವಾನ್ ಗೆ ಮಾಲಿಂಗ ಸೂಕ್ತ ಕೋಚ್ ಆಗಿದ್ದಾರೆ. ನನ್ನ ಪ್ರಕಾರ ಇಬ್ಬರು ಉತ್ತಮ ವೇಗಿಗಳಾಗಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಕೋಚ್ ಮಾರ್ಕ್ ಬೌಚರ್ ಹೇಳಿದ್ದಾರೆ.