×
Ad

ಇಸ್ಲಾಮಾಬಾದ್ ಸ್ಫೋಟ: ಪಾಕ್ ತೊರೆಯದಂತೆ ಆಟಗಾರರ ಮನವೊಲಿಸಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ

Update: 2025-11-13 08:33 IST

Photo Credit : PTI 

ಇಸ್ಲಾಮಾಬಾದ್: ಇಸ್ಲಾಮಾಬಾದ್‍ನಲ್ಲಿ ಸಂಭವಿಸಿದ ಭೀಕರ ಸ್ಫೋಟದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಏಕದಿನ ಸರಣಿ ಆಡುತ್ತಿರುವ ಶ್ರೀಲಂಕಾ ಕ್ರಿಕೆಟ್ ತಂಡದ ಸದಸ್ಯರು ಭದ್ರತಾ ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆಟಗಾರರ ಮನವೊಲಿಸಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ ಸರಣಿ ಮುಂದುವರಿಸುವಂತೆ ಸೂಚನೆ ನೀಡಿದೆ. ರಾವಲ್ಪಿಂಡಿಯಲ್ಲಿ ನಡೆಯುವ ಎರಡನೇ ಪಂದ್ಯಕ್ಕೆ ಮುನ್ನ ತಂಡದ ಎಂಟು ಸದಸ್ಯರು ಸ್ವದೇಶಕ್ಕೆ ಮರಳುವ ಅಪೇಕ್ಷೆ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ರಾವಲ್ಪಿಂಡಿಗೆ ಸನಿಹದಲ್ಲಿರುವ ಇಸ್ಲಾಮಾಬಾದ್‍ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 12 ಮಂದಿ ಮೃತಪಟ್ಟ ಬೆನ್ನಲ್ಲೇ, ಶ್ರೀಲಂಕಾ ಆಟಗಾರರು ಭದ್ರತಾ ಆತಂಕ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

"ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ತಂಡದ ವ್ಯವಸ್ಥಾಪಕರು ಮಾಹಿತಿ ನೀಡಿ ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ರಾಷ್ಟ್ರೀಯ ತಂಡದ ಹಲವು ಸದಸ್ಯರು ಭದ್ರತಾ ಕಳಕಳಿಯ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ಮರಳಲು ಅವಕಾಶ ನೀಡುವಂತೆ ಕೋರಿದ್ದಾರೆ ಎನ್ನುವುದನ್ನು ಗಮನಕ್ಕೆ ತಂದರು. ಈ ಆತಂಕ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು; ಪಿಸಿಬಿ ಜತೆ ಚರ್ಚಿಸಿ ಪ್ರತಿ ಸದಸ್ಯರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಕೋರಲಾಗಿದೆ. ಆದ್ದರಿಂದ ತಂಡದ ಸದಸ್ಯರು ಸರಣಿಯಲ್ಲಿ ಮುಂದುವರಿಯುವಂತೆ ಎಸ್‍ಎಲ್‍ಸಿ ಮನವಿ ಮಾಡಿತು" ಎಂದು ಅಧಿಕೃತ ಪ್ರಕಟಣೆ ಹೇಳಿದೆ.

ಈ ನಿರ್ದೇಶನದ ಬಳಿಕವೂ ಆಟಗಾರರು ಸ್ವದೇಶಕ್ಕೆ ಮರಳಲು ನಿರ್ಧರಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಂಡಳಿ ಎಚ್ಚರಿಕೆ ನೀಡಿದೆ. ಜತೆಗೆ ತವರಿಗೆ ಮರಳುವ ಸದಸ್ಯರ ಬದಲಾಗಿ ಹೊಸ ಆಟಗಾರರನ್ನು ನಿಯೋಜಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News