×
Ad

ಐಎಸ್‌ಎಸ್‌ಎಫ್ ವಿಶ್ವಕಪ್ ಫೈನಲ್ | ಮಹಿಳೆಯರ 10 ಮೀ.ರೈಫಲ್ ಸ್ಪರ್ಧೆ : ಭಾರತದ ಸೋನಮ್ ಮಸ್ಕರ್‌ಗೆ ಬೆಳ್ಳಿ

Update: 2024-10-15 21:04 IST

 ಸೋನಮ್ ಮಸ್ಕರ್‌ | PC : X 

ಚೆನ್ನೈ : ಹೊಸದಿಲ್ಲಿಯಲ್ಲಿ ಮಂಗಳವಾರ ನಡೆದ ಐಎಸ್‌ಎಸ್‌ಎಫ್ ವರ್ಲ್ಡ್ ಕಪ್ ಫೈನಲ್‌ನಲ್ಲಿ ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಸೋನಮ್ ಮಸ್ಕರ್ ಬೆಳ್ಳಿ ಪದಕವನ್ನು ಜಯಿಸಿದ್ದಾರೆ.

ಸೋನಮ್ ಫೈನಲ್‌ನಲ್ಲಿ 252.9 ಅಂಕ ಗಳಿಸಿದರು. ಒಲಿಂಪಿಕ್ಸ್ ಚಾಂಪಿಯನ್ ಹುಯಾಂಗ್ ಯುಟಿಂಗ್ ನೂತನ ವಿಶ್ವ ದಾಖಲೆ(254.5)ಯೊಂದಿಗೆ ಚಿನ್ನದ ಪದಕ ಜಯಿಸಿದರು.

ಫ್ರಾನ್ಸ್‌ನ ಒಸಿಯನ್ ಮುಲ್ಲರ್ 231.1 ಅಂಕ ಗಳಿಸಿ ಕಂಚಿನ ಪದಕ ಜಯಿಸಿದರು. ಸ್ಪರ್ಧೆಯಲ್ಲಿದ್ದ ಭಾರತದ ಇನ್ನೋರ್ವ ಸ್ಪರ್ಧಿ ತಿಲೋತ್ತಮ ಸೇನ್ ಆರನೇ ಸ್ಥಾನ ಪಡೆದರು.

ಚೀನಾದ ಯುಟಿಂಗ್ ಅವರು ಬಾಕುವಿನಲ್ಲಿ 2023ರಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ತಮ್ಮದೇ ದೇಶದ ಹಾನ್ ಜಿಯಾಯು ನಿರ್ಮಿಸಿದ್ದ ವಿಶ್ವ ದಾಖಲೆ(254 ಅಂಕ)ಯನ್ನು ಮುರಿದರು.

ಪುರುಷರ 10 ಮೀ.ಏರ್ ಪಿಸ್ತೂಲ್ ಹಾಗೂ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಭಾರತದ ಅರ್ಜುನ್ ಚೀಮಾ ಹಾಗೂ ರಿಧಮ್ ಸಾಂಗ್ವಾನ್ ಸ್ಪರ್ಧಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News