ಜೂನಿಯರ್ ಮಹಿಳೆಯರ ಹಾಕಿ ಏಶ್ಯಕಪ್ : ಭಾರತ ತಂಡ ಪ್ರಕಟ

Update: 2026-08-06 20:58 IST

Photo Credit : hockeyindia.org

ಹೊಸದಿಲ್ಲಿ, ಆ.6: ಚೀನಾದ ಮೊಖಿಯಲ್ಲಿ ಆಗಸ್ಟ್ 30ರಿಂದ ಸೆಪ್ಟಂಬರ್ 13ರ ತನಕ ನಡೆಯಲಿರುವ 2026ರ ಆವೃತ್ತಿಯ ಜೂನಿಯರ್ ಮಹಿಳೆಯರ ಏಶ್ಯ ಕಪ್ ಟೂರ್ನಿಗಾಗಿ 18 ಸದಸ್ಯರ ಜೂನಿಯರ್ ಮಹಿಳೆಯರ ಹಾಕಿ ತಂಡವನ್ನು ಪ್ರಕಟಿಸಲಾಗಿದೆ. ಮಿಡ್ ಫೀಲ್ಡರ್ ಖೈಡೆಮ್ ಶಿಲೈಮಾ ಚಾನು ನಾಯಕಿಯಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಜೂನಿಯರ ಹಾಕಿ ವಿಶ್ವಕಪ್ ಈ ವರ್ಷ ಭಾರತ ಆಡಲಿರುವ ಅತಿದೊಡ್ಡ ವಯೋಮಿತಿಯ ಟೂರ್ನಿಯಾಗಿದೆ. ಟೂರ್ನಮೆಂಟ್‌ಗಿಂತ ಮೊದಲು ನೂತನ ಕೋಚ್ ಟಿಮ್ ವೈಟ್ ಮಾರ್ಗದರ್ಶನದಲ್ಲಿ ತಿಂಗಳುಗಳ ಕಾಲ ತಯಾರಿ ನಡೆಸುವ ವಿಶ್ವಾಸದಲ್ಲಿದೆ.

ಬ್ರಿಟನ್ ಪ್ರವಾಸದಿಂದ ಹಿಂತಿರುಗಿದ ನಂತರ ಭಾರತ ತಂಡವು ಜೂನಿಯರ್ ಏಶ್ಯ ಕಪ್‌ಗೆ ತೆರಳಲಿದೆ. ಏಶ್ಯಕಪ್ ಪೂರ್ವ ತಯಾರಿಯ ಭಾಗವಾಗಿ ಭಾರತವು ಬ್ರಿಟನ್‌ನಲ್ಲಿ ಸ್ಕಾಟ್‌ಲ್ಯಾಂಡ್, ಇಂಗ್ಲೆಂಡ್, ಬೆಲ್ಜಿಯಮ್ ಹಾಗೂ ಅಮೆರಿಕ ತಂಡಗಳನ್ನು ಎದುರಿಸಲಿದೆ.

2026ರ ಏಶ್ಯ ಕಪ್‌ಗಾಗಿ ಭಾರತದ ಜೂನಿಯರ್ ಮಹಿಳೆಯರ ಹಾಕಿ ತಂಡ

ಗೋಲ್‌ಕೀಪರ್‌ಗಳು: ನಿಧಿ, ಹರ್ಷಾ ರಾಣಿ ಮಿಂಝ್

ಡಿಫೆಂಡರ್‌ಗಳು: ಪೂಜಾ ಸಾಹೂ, ಸುಪ್ರಿಯಾ, ಪೂಜಾ ಮಲಿಕ್, ಪಾರ್ವತಿ ಟೊಪ್ನೊ, ಮಧು

ಮಿಡ್ ಫೀಲ್ಡರ್‌ಗಳು: ಖೈಡೆಮ್ ಶಿಲೈಮಾ ಚಾನು(ನಾಯಕಿ), ತನುಜಾ ಟೊಪ್ಪೊ, ಬಿನಿಮಾ ಧಾನ್, ರೋಶನಿ, ಗೀತಾ ಯಾದವ್

ಫಾರ್ವರ್ಡ್‌ಗಳು: ಲಾಲ್‌ರಿನ್‌ಪುಯಿ, ಪೂರ್ಣಿಮಾ ಯಾದವ್, ಸುಖವೀರ್ ಕೌರ್, ಕೃಷ್ಣ ಶರ್ಮಾ, ಸಾನಿಕಾ ಚಂದ್ರಕಾಂತ್ ಮಾನೆ, ಮಧು ಸಿದಾರ್

ಪರ್ಯಾಯ ಆಟಗಾರ್ತಿಯರು: ಲಾಲ್‌ಬಿಯಾಕ್‌ಸಿಯಾಮಿ, ತನುಶ್ರೀ ದಿನೇಶ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News