×
Ad

ನಾಳೆ(ಜ.29)ಯಿಂದ ಕರ್ನಾಟಕ–ಪಂಜಾಬ್ ರಣಜಿ ಪಂದ್ಯ

Update: 2026-01-28 22:14 IST

ಕೆ.ಎಲ್. ರಾಹುಲ್ | Photo Credit ; PTI 

ಮೊಹಾಲಿ, ಜ. 28: ರಣಜಿ ಟ್ರೋಫಿಯ ಎಲಿಟ್ ‘ಬಿ’ ಗುಂಪಿನ ಅಂತಿಮ ಸುತ್ತಿನ ಪಂದ್ಯವು ಕರ್ನಾಟಕ ಮತ್ತು ಪಂಜಾಬ್ ತಂಡಗಳ ನಡುವೆ ಮೊಹಾಲಿಯ ಐಎಸ್ ಬಿಂದ್ರಾ ಪಿಸಿಎ ಸ್ಟೇಡಿಯಂನಲ್ಲಿ ಗುರುವಾರ ಆರಂಭಗೊಳ್ಳಲಿದೆ.

ಕಳೆದ ವಾರ ಕರ್ನಾಟಕ ತಂಡವು ಮಧ್ಯಪ್ರದೇಶ ವಿರುದ್ಧ 217 ರನ್‌ಗಳ ಅಂತರದ ಭಾರೀ ಸೋಲನ್ನು ಅನುಭವಿಸಿದ್ದು, ಇದು ದೊಡ್ಡ ಹಿನ್ನಡೆಯಾಗಿದೆ. ಹೀಗಾಗಿ, 21 ಅಂಕಗಳನ್ನು ಹೊಂದಿರುವ ಕರ್ನಾಟಕ ತಂಡವು ಲಭ್ಯವಿರುವ ಎರಡು ನಾಕೌಟ್ ಸ್ಥಾನಗಳಿಗಾಗಿ ಮಹಾರಾಷ್ಟ್ರ (24 ಅಂಕಗಳು), ಮಧ್ಯಪ್ರದೇಶ (22) ಮತ್ತು ಸೌರಾಷ್ಟ್ರ (19) ತಂಡಗಳೊಂದಿಗೆ ಸ್ಪರ್ಧೆಯಲ್ಲಿದೆ.

ಮಧ್ಯಪ್ರದೇಶ ವಿರುದ್ಧದ ಸೋಲಿನ ಬಳಿಕ ಕರ್ನಾಟಕ ತಂಡದ ನಾಯಕತ್ವದಲ್ಲಿ ಬದಲಾವಣೆ ಮಾಡಲಾಗಿದೆ. ಮಯಾಂಕ್ ಅಗರ್ವಾಲ್‌ರಿಂದ ದೇವದತ್ತ ಪಡಿಕ್ಕಲ್ ನಾಯಕ ಸ್ಥಾನವನ್ನು ಸ್ವೀಕರಿಸಿದ್ದಾರೆ.

ಚಂಡಿಗಢದಲ್ಲಿ ಈಗ ಅಕಾಲಿಕ ಮಳೆಯಾಗುತ್ತಿದೆ. ಅದೂ ಅಲ್ಲದೆ, ಚಳಿಗಾಲದ ಉಷ್ಣತೆಯು ತೀವ್ರವಾಗಿ ಕುಸಿದಿದೆ. ಹೀಗಾಗಿ, ಶುಭ್ರ ಆಕಾಶವಿದ್ದರೆ ಮಾತ್ರ ಪಂದ್ಯ ಸುಗಮವಾಗಿ ನಡೆಯುವ ಸಾಧ್ಯತೆ ಇದೆ. ಪಂದ್ಯ ಸುಗಮವಾಗಿ ನಡೆಯಿ ಗೆಲುವು ಸಾಧಿಸುವುದು ಕರ್ನಾಟಕಕ್ಕೆ ಅತ್ಯಂತ ಅಗತ್ಯವಾಗಿದೆ.

ಈ ಋತುವಿನಲ್ಲಿ ಕರ್ನಾಟಕದ ಗರಿಷ್ಠ ರನ್ ಗಳಿಕೆದಾರ ಕರುಣ್ ನಾಯರ್ ಹಾಗೂ ವೇಗಿ ವಿ. ವೈಶಾಖ್ ಗಾಯಗೊಂಡಿದ್ದಾರೆ. ಭಾರತೀಯ ತಂಡದ ಕೆ.ಎಲ್. ರಾಹುಲ್ ಮತ್ತು ಪ್ರಸಿದ್ಧ ಕೃಷ್ಣ ಕರ್ನಾಟಕ ತಂಡಕ್ಕೆ ಸೇರ್ಪಡೆಯಾಗಿರುವುದು ಧನಾತ್ಮಕ ಬೆಳವಣಿಗೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News