×
Ad

ಖೋ ಖೋ ವಿಶ್ವಕಪ್: ಭಾರತಕ್ಕೆ ಅವಳಿ ವಿಶ್ವ ಕಿರೀಟ

Update: 2025-01-19 22:03 IST

PC : X \ KhoKhoWorldCup

ಹೊಸದಿಲ್ಲಿ: ಭಾರತೀಯ ಪುರುಷರ ಹಾಗೂ ಮಹಿಳೆಯರ ಖೋ ಖೋ ತಂಡಗಳು ಒಂದೇ ದಿನ ಮೊದಲ ಆವೃತ್ತಿಯ ಖೋ ಖೋ ವಿಶ್ವಕಪ್ ಎತ್ತಿ ಹಿಡಿದು ಐತಿಹಾಸಿಕ ಸಾಧನೆ ಮಾಡಿವೆ.

ಪುರುಷರ, ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್

ರವಿವಾರ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಖೋ ಖೋ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ಪುರುಷರ ತಂಡವು ನೇಪಾಳ ತಂಡವನ್ನು 54-36 ಅಂಕಗಳ ಅಂತರದಿಂದ ರೋಚಕವಾಗಿ ಮಣಿಸಿತು.

ಭಾರತದ ಮಹಿಳೆಯರ ಖೋ ಖೋ ತಂಡ ನೇಪಾಳ ತಂಡವನ್ನು ಸೋಲಿಸಿ ವಿಶ್ವಕಪ್ ಜಯಿಸಿದ ಬೆನ್ನಿಗೇ ಪುರುಷರ ತಂಡವೂ ವಿಶ್ವ ಚಾಂಪಿಯನ್ ಕಿರೀಟ ಧರಿಸಿದೆ.

ಭಾರತ-ನೇಪಾಳ ಪುರುಷರ ತಂಡಗಳು ಟೂರ್ನಿಯಲ್ಲಿ 2ನೇ ಬಾರಿ ಮುಖಾಮುಖಿಯಾದವು. ಟೂರ್ನಿಯ ಮೊದಲ ಪಂದ್ಯದಲ್ಲಿ ಪ್ರತಿಕ್ ವೈಕರ್ ಬಳಗವು ನೇಪಾಳ ತಂಡವನ್ನು 42-37 ಅಂತರದಿಂದ ಮಣಿಸಿತ್ತು. ಆ ನಂತರ ಆತಿಥೇಯ ತಂಡವು ಅಜೇಯ ಓಟವನ್ನು ಮುಂದುರಿಸಿತು.

ಶನಿವಾರ ನಡೆದ ಸೆಮಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 62-42 ಅಂಕಗಳಿಂದ ಮಣಿಸಿದ ಭಾರತ ಪುರುಷರ ತಂಡ ಫೈನಲ್‌ಗೆ ತಲುಪಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News