×
Ad

ಅತಿ ಹೆಚ್ಚು ಏಕದಿನ ಕ್ಯಾಚ್‌ಗಳನ್ನು ಹಿಡಿದ ಭಾರತೀಯ ಕ್ರಿಕೆಟಿಗ; ಅಝರುದ್ದೀನ್ ದಾಖಲೆಯನ್ನು ಸರಿಗಟ್ಟಿದ ಕೊಹ್ಲಿ

Update: 2025-02-20 21:44 IST

ವಿರಾಟ್ ಕೊಹ್ಲಿ | PTI 

ದುಬೈ: ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಭಾರತೀಯ ಕ್ರಿಕೆಟಿಗನಾಗಿ ಮುಹಮ್ಮದ್ ಅಝರುದ್ದೀನ್ ಹೊಂದಿರುವ ದಾಖಲೆಯನ್ನು ವಿರಾಟ್ ಕೊಹ್ಲಿ ಗುರುವಾರ ಸರಿಗಟ್ಟಿದ್ದಾರೆ. ದುಬೈನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಅವರು ಈ ಸಾಧನೆಯನ್ನು ಮಾಡಿದ್ದಾರೆ.

43ನೇ ಓವರ್‌ನಲ್ಲಿ ಅವರು ದಾಖಲೆಯನ್ನು ಸರಿಗಟ್ಟಿದರು. ಮುಹಮ್ಮದ್ ಶಮಿ ಎಸೆತದಲ್ಲಿ ಬಾಂಗ್ಲಾದೇಶದ ಜಾಕಿರ್ ಅಲಿ ನೀಡಿದ ಕ್ಯಾಚನ್ನು ಕೊಹ್ಲಿ ಲಾಂಗ್-ಆನ್‌ನಲ್ಲಿ ಪಡೆದರು.

ಇದು ಏಕದಿನ ಪಂದ್ಯದಲ್ಲಿ ಕೊಹ್ಲಿಯ 156ನೇ ಕ್ಯಾಚಾಗಿದೆ. ಈಗ ಗರಿಷ್ಠ ಕ್ಯಾಚ್‌ಗಳನ್ನು ಪಡೆದ ಭಾರತೀಯ ಕ್ರಿಕೆಟಿಗರ ಪಟ್ಟಿಯಲ್ಲಿ ಕೊಹ್ಲಿ ಮತ್ತು ಅಝರುದ್ದೀನ್ ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಸಚಿನ್ ತೆಂಡುಲ್ಕರ್ (140), ರಾಹುಲ್ ದ್ರಾವಿಡ್ (124) ಮತ್ತು ಸುರೇಶ್ ರೈನಾ (102) ಇದ್ದಾರೆ.

ಅಂತರರಾಷ್ಟ್ರೀಯ ಪಟ್ಟಿಯಲ್ಲಿ, 218 ಕ್ಯಾಚ್‌ಗಳನ್ನು ಹಿಡಿದಿರುವ ಶ್ರೀಲಂಕಾದ ಮಹೇಲಾ ಜಯವರ್ಧನೆ ಅಗ್ರ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯದ ರಿಕಿ ಪಾಂಟಿಂಗ್ (160), ಮೂರನೇ ಸ್ಥಾನದಲ್ಲಿ ಅಝರುದ್ದೀನ್ ಮತ್ತು ಕೊಹ್ಲಿ ಇದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News