×
Ad

ವೇಗದ ಅರ್ಧ ಶತಕ ದಾಖಲಿಸಿದ ಕುಸಲ್ ಪೆರೆರಾ

Update: 2023-11-09 15:43 IST

Kusal Perera (Photo: Twitter)

ಬೆಂಗಳೂರು : ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ನ್ಯೂಝಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾದ ಕುಸಲ್ ಪೆರೆರಾ ವೇಗದ ಅರ್ಧ ಶತಕ ದಾಖಲಿಸಿದ್ದಾರೆ.

ಶ್ರೀಲಂಕಾದ ಎಡಗೈ ಆಟಗಾರ ಕುಸಲ್‌ ಪೆರೆರಾ 22 ಎಸೆತಗಳಲ್ಲಿ ತಮ್ಮ ಅರ್ಧಶತಕ ದಾಖಲಿಸಿದರು. ಪೆರೆರಾ 28 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿ 51 ರನ್‌ ಗಳಿಸಿದ್ದಾಗ ಲಾಕಿ ಫರ್ಗುಸನ್ ಅವರ ಎಸೆತದಲ್ಲಿ ಮಿಷೆಲ್‌ ಸಾಂಟ್ನರ್‌ ಗೆ ಕ್ಯಾಚಿತ್ತು ಔಟಾದರು.

ಪೆರೇರಾ ಅವರ ವೇಗದ ಅರ್ಧ ಶತಕಕ್ಕೂಮೊದಲು, ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಮತ್ತು ಶ್ರೀಲಂಕಾದ ಕುಸಾಲ್ ಮೆಂಡಿಸ್ 2023ರ ವಿಶ್ವಕಪ್‌ ನಲ್ಲಿ ವೇಗದ ಅರ್ಧಶತಕ ದಾಖಲೆಯನ್ನು ಹೊಂದಿದ್ದರು.

2023ರ ಏಕದಿನ ವಿಶ್ವಕಪ್ ನಲ್ಲಿ ವೇಗದ ಅರ್ಧಶತಕಗಳು :

22 ಎಸೆತಗಳು – ಶ್ರೀಲಂಕಾದ ಕುಸಲ್ ಪೆರೆರಾ, ನ್ಯೂಜಿಲೆಂಡ್ ವಿರುದ್ಧ, ಬೆಂಗಳೂರು

25 ಎಸೆತಗಳು – ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್, ನ್ಯೂಜಿಲೆಂಡ್ ವಿರುದ್ಧ, ಧರ್ಮಶಾಲಾ

25 ಎಸೆತಗಳು - ಶ್ರೀಲಂಕಾದ ಕುಸಲ್ ಮೆಂಡಿಸ್, ದಕ್ಷಿಣ ಆಫ್ರಿಕಾ ವಿರುದ್ಧ, ದೆಹಲಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News