ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ : ಹಿಟ್ ವಿಕೆಟ್‌ಗೆ ಒಳಗಾದ 2ನೇ ಆಟಗಾರ್ತಿ ನಶ್ರಾ ಸಂಧು
Update: 2025-10-02 21:57 IST
ನಶ್ರಾ ಸಂಧು | Photo Credit : @cricketworldcup
ಕೊಲಂಬೊ,ಸೆ.2: ಪಾಕಿಸ್ತಾನದ ಆಟಗಾರ್ತಿ ನಶ್ರಾ ಸಂಧು ಮಹಿಳೆಯರ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಹಿಟ್ ವಿಕೆಟ್‌ನಿಂದ ಔಟಾದ 2ನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಗುರುವಾರ ನಡೆದ ವಿಶ್ವಕಪ್ ಪಂದ್ಯದ ವೇಳೆ ಸಂಧು ಹಿಟ್ ವಿಕೆಟ್‌ನಿಂದ ಔಟಾದರು.
52 ವರ್ಷಗಳ ಹಿಂದೆ ಲಿನೆಟ್ ಸ್ಮಿತ್ ಮಹಿಳೆಯರ ಇಂಟರ್‌ನ್ಯಾಶನಲ್ ಇಲೆವೆನ್ ತಂಡದ ಪರ ಆಡುವಾಗ ಈ ರೀತಿ ಔಟಾಗಿದ್ದರು.
35ನೇ ಓವರ್‌ನಲ್ಲಿ ಶೋರ್ನ್ ಅಖ್ತರ್ ಬೌಲಿಂಗ್‌ನಲ್ಲಿ ಹಿಟ್ ವಿಕೆಟ್ ಆಗಿರುವ ಸಂಧು ಕೇವಲ 1 ರನ್ ಗಳಿಸಿದ್ದರು. ಈ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.