ಜುಲೈ 25ಕ್ಕೆ ನೀರಜ್ ಚೋಪ್ರಾ ಕ್ಲಾಸಿಕ್ ಟೂರ್ನಿ
ನೀರಜ್ ಚೋಪ್ರಾ | PC : PTI
ಹೊಸದಿಲ್ಲಿ : ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಜುಲೈ 5ರಂದು 2025ರ ಆವೃತ್ತಿಯ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಟೂರ್ನಿ ನಡೆಯಲಿದೆ ಎಂದು ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್ ಮಂಗಳವಾರ ಪ್ರಕಟಿಸಿದೆ.
ಈ ಹಿಂದೆ ಮೇ 24ರಂದು ಈ ಟೂರ್ನಿಯು ನಿಗದಿಯಾಗಿತ್ತು. ಆದರೆ ಭದ್ರತೆಯನ್ನು ಪರಿಗಣಿಸಿ, ರಾಷ್ಟ್ರದೊಂದಿಗಿನ ಒಗ್ಗಟ್ಟಿನ ಸಂಕೇತವಾಗಿ ಮರು ನಿಗದಿಪಡಿಸಲಾಯಿತು.
ಭಾರತದ ಮೊಟ್ಟ ಮೊದಲ ಅಂತರ್‌ರಾಷ್ಟ್ರೀಯ ಜಾವೆಲಿನ್ ಸ್ಪರ್ಧೆ ಎಂದು ಕರೆಯಲ್ಪಡುವ ಈ ಕ್ರೀಡಾಕೂಟವು ನೀರಜ್ ಚೋಪ್ರಾ ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್, ಅತ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ(ಎಎಫ್‌ಐ) ಹಾಗೂ ವಿಶ್ವ ಅತ್ಲೆಟಿಕ್ಸ್(ಡಬ್ಲ್ಯುಎ)ನಡುವಿನ ಸಹಯೋಗದೊಂದಿಗೆ ನಡೆಯಲಿದೆ. ಇದು ಭಾರತದಲ್ಲಿ ನಡೆಯಲಿರುವ ಅತ್ಯುನ್ನತ ಶ್ರೇಣಿಯ ಅಂತರ್‌ರಾಷ್ಟ್ರೀಯ ಅತ್ಲೆಟಿಕ್ಸ್ ಕೂಟವಾಗಲಿದೆ.
ಹಾಲಿ ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ನೇತೃತ್ವದಲ್ಲಿ ನಡೆಯುವ ಟೂರ್ನಿಯಲ್ಲಿ 2 ಬಾರಿಯ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್(ಗ್ರೆನಡಾ), 2016ರ ರಿಯೋ ಒಲಿಂಪಿಕ್ಸ್ ಚಾಂಪಿಯನ್ ಥಾಮಸ್ ರೊಹ್ಲರ್(ಜರ್ಮನಿ), 2015ರ ವಿಶ್ವ ಚಾಂಪಿಯನ್ ಜುಲಿಯಸ್ ಯೆಗೊ(ಕೀನ್ಯ), ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಹಾಗೂ ಭಾರತದ ಉದಯೋನ್ಮುಖ ಜಾವೆಲಿನ್ ಸ್ಟಾರ್ ಕಿಶೋರ್ ಜೇನಾ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ನೀರಜ್ ಚೋಪ್ರಾ ಕ್ಲಾಸಿಕ್ ಟೂರ್ನಿಯು ಹೊಸ ಪೀಳಿಗೆಯ ಭಾರತೀಯ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುವುದರ ಜೊತೆಗೆ ಜಾಗತಿಕ ಮಟ್ಟದ ಪ್ರಮುಖ ಪ್ರತಿಭೆಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ.