×
Ad

ದೋಹಾ ಡೈಮಂಡ್ ಲೀಗ್: ನೀರಜ್ ಚೋಪ್ರಾ ಸಹಿತ ನಾಲ್ವರು ಭಾರತೀಯರು ಸ್ಪರ್ಧೆ

Update: 2025-05-11 23:42 IST

ದೋಹಾ: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಸಹಿತ ನಾಲ್ವರು ಭಾರತೀಯರು ಮೇ 16ರಂದು ನಡೆಯಲಿರುವ ಪ್ರತಿಷ್ಠಿತ ಡೈಮಂಡ್ ಲೀಗ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಭಾರತವು ಡೈಮಂಡ್ ಲೀಗ್‌ನಲ್ಲಿ ಮೊದಲ ಬಾರಿ ಗರಿಷ್ಠ ಸ್ಪರ್ಧಿಗಳನ್ನು ಕಳುಹಿಸುತ್ತಿದೆ.

2023ರಲ್ಲಿ(88.67 ಮೀ.)ಡೈಮಂಡ್ಲೀಗ್ ಪ್ರಶಸ್ತಿಯನ್ನು ಜಯಿಸಿ, 2024ರಲ್ಲಿ 2ನೇ ಸ್ಥಾನ(88.36 ಮೀ.)ಪಡೆದಿದ್ದ ಚೋಪ್ರಾ ಅವರೊಂದಿಗೆ ಪುರುಷರ ಜಾವೆಲಿನ್ ಎಸೆತದಲ್ಲಿ ಕಿಶೋರ್ ಜೆನಾ ಸೇರಿಕೊಳ್ಳಲಿದ್ದಾರೆ. ಜೆನಾ 2024ರಲ್ಲಿ ಭಾಗವಹಿಸಿ(76.31 ಮೀ.)9ನೇ ಸ್ಥಾನ ಪಡೆದಿದ್ದರು.

ಭಾರತದ ಇತರ ಇಬ್ಬರು ಸ್ಪರ್ಧಿಗಳಾದ ಗುಲ್ವೀರ್ ಸಿಂಗ್ ಹಾಗೂ ಪಾರುಲ್ ಚೌಧರಿ ಡೈಮಂಡ್ ಲೀಗ್‌ಗೆ ತೆರಳಲಿದ್ದಾರೆ. ರಾಷ್ಟ್ರೀಯ ದಾಖಲೆ ವೀರ ಗುಲ್ವೀರ್ ಪುರುಷರ 5,000 ಮೀ.ನಲ್ಲಿ ಮೊದಲ ಬಾರಿ ಡೈಮಂಡ್ ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ. ಪಾರುಲ್ ಮಹಿಳೆಯರ 3000 ಮೀ. ಸ್ಟೀಪಲ್ಚೇಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News