ಕ್ರಿಕೆಟ್ ವಿಶ್ವಕಪ್: ಭಾರತದ ವಿರುದ್ಧ ಪಾಕಿಸ್ತಾನದ ಎರಡು ವಿಕೆಟ್ ಪತನ
Update: 2023-10-14 15:14 IST
Photo : cricketworldcup.com
ಅಹ್ಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಪಾಕ್ ನಡುವಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಪಾಕಿಸ್ತಾನ ಎರಡು ವಿಕೆಟ್ ಕಳೆದುಕೊಂಡಿದೆ.
ಪಾಕಿಸ್ತಾನ 7.6 ಓವರ್ ಗಳಲ್ಲಿ 41 ರನ್ ಗಳಿಸಿದ್ದಾಗ ಸಿರಾಜ್ ಎಸೆತದಲ್ಲಿ ಮೊದಲ ಕ್ರಮಾಂಕದ ಬ್ಯಾಟರ್ ಅಬ್ದುಲ್ಲಾ ಶಫೀಕ್, ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದರು. ಎರಡನೇ ಕ್ರಮಾಂಕದ ಬ್ಯಾಟರ್ ಇಮಾಮ್ ಹಕ್ ಸ್ವಲ್ಪ ಮಟ್ಟಿಗೆ ಸ್ಥಿರ ಪ್ರದರ್ಶನಕ್ಕೆ ಪ್ರಯತ್ನಿಸಿದರೂ, 12.3 ಓವರ್ ನಲ್ಲಿ ತಂಡ 73 ರನ್ ಗಳಿಸಿದ್ದಾಗ ಹಾರ್ದಿಕ್ ಪಾಂದ್ಯ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಕೆ.ಎಲ್ ರಾಹುಲ್ ಗೆ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು.
ಈಗ ಕ್ರೀಸ್ ನಲ್ಲಿ ಪಾಕ್ ನಾಯಕ ಬಾಬರ್ ಅಝಮ್, ವಿಕೆಟ್ ಕೀಪರ್ ಮೊಹಮ್ಮದ್ ರಿಝ್ವಾನ್ ಆಡುತ್ತಿದ್ದಾರೆ. ಪಾಕಿಸ್ತಾನ 12.4 ಓವರ್ ಗಳಲ್ಲಿ 73 ರನ್ ಗಳಿಸಿ, 2 ವಿಕೆಟ್ ಕಳೆದುಕೊಂಡಿದೆ.