×
Ad

ಅತ್ಯಂತ ಹೆಚ್ಚು ಪ್ರೇಕ್ಷಕರ ಹಾಜರಾತಿಗೆ ಸಾಕ್ಷಿಯಾದ ಪರ್ತ್ ಸ್ಟೇಡಿಯಂ

Update: 2025-11-22 21:22 IST

Photo Credit : X

ಮೆಲ್ಬರ್ನ್, ಫೆ.22: ಆಸ್ಟ್ರೇಲಿಯ ಕ್ರಿಕೆಟ್ ತಂಡ ಎರಡೇ ದಿನದಲ್ಲಿ ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಗೆದ್ದುಕೊಂಡಿದ್ದು, ಪರ್ತ್ ಕ್ರೀಡಾಂಗಣವು ಟೆಸ್ಟ್ ಪಂದ್ಯದಲ್ಲಿ ಇದೇ ಮೊದಲ ಬಾರಿ ಅತ್ಯಂತ ಹೆಚ್ಚು ಪ್ರೇಕ್ಷಕರ ಹಾಜರಾತಿಗೆ ಸಾಕ್ಷಿಯಾಯಿತು.

ಮೊದಲ ಟೆಸ್ಟ್‌ನ ಎರಡನೇ ದಿನವಾದ ಶನಿವಾರ 49,983 ಪ್ರೇಕ್ಷಕರು ಆಗಮಿಸಿದ್ದು ಈ ಮೂಲಕ ಪಂದ್ಯ ವೀಕ್ಷಿಸಿದ ಒಟ್ಟು ಪ್ರೇಕ್ಷಕರ ಸಂಖ್ಯೆ 1,01,514 ಕ್ಕೇರಿದೆ. ಕಳೆದ ವರ್ಷ ಭಾರತ ತಂಡದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 96,463 ಜನರು ಆಗಮಿಸಿದ್ದರು. ಇದೀಗ ಆ ದಾಖಲೆಯು ಪತನಗೊಂಡಿದೆ.

1921ರ ನಂತರ ಮೊದಲ ಬಾರಿ ಆ್ಯಶಸ್ ಸರಣಿಯ ಪಂದ್ಯವು ಎರಡು ದಿನದೊಳಗೆ ಅಂತ್ಯವಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News