×
Ad

WPL: ಸತತ ಗೆಲುವಿನ ದಾಖಲೆಯೊಂದಿಗೆ ಪ್ಲೇ ಆಫ್‌ಗೆ ಲಗ್ಗೆ ಇಟ್ಟ RCB

Update: 2026-01-20 21:25 IST

Photo Credit ; AP \ PTI 

ಬೆಂಗಳೂರು, ಜ.20: ಗುಜರಾತ್ ಟೈಟಾನ್ಸ್ ವಿರುದ್ಧ ವಡೋದರದಲ್ಲಿ ಸೋಮವಾರ ರಾತ್ರಿ 61 ರನ್‌ ಗಳ ಅಂತರದಿಂದ ಜಯಶಾಲಿಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು 2026ರ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನಲ್ಲಿ ಪ್ಲೇ ಆಫ್‌ಗೆ ತೇರ್ಗಡೆಯಾದ ಮೊದಲ ತಂಡವೆಂಬ ಹಿರಿಮೆಗೆ ಪಾತ್ರವಾಗಿದೆ.

ಗೌತಮಿ ನಾಯಕ್ ಅವರ ಚೊಚ್ಚಲ ಡಬ್ಲ್ಯುಪಿಎಲ್ ಅರ್ಧಶತಕದ ನೆರವಿನಿಂದ 6 ವಿಕೆಟ್‌ ಗಳ ನಷ್ಟಕ್ಕೆ 178 ರನ್ ಗಳಿಸಿದ ಆರ್‌ಸಿಬಿ ತಂಡ, ಬೌಲರ್‌ಗಳ ಸಂಘಟಿತ ದಾಳಿಯ ಸಹಾಯದಿಂದ ಈ ವರ್ಷದ ಡಬ್ಲ್ಯುಪಿಎಲ್‌ನಲ್ಲಿ ಸತತ ಐದನೇ ಗೆಲುವು ದಾಖಲಿಸಿತು.

2025ರ ಆವೃತ್ತಿಯ ಟೂರ್ನಿಯ ಕೊನೆಯ ಪಂದ್ಯ ಸೇರಿದಂತೆ, ಆರ್‌ಸಿಬಿ ತಂಡ ಮಹಿಳೆಯರ ಟಿ20 ಸ್ಪರ್ಧಾವಳಿಯಲ್ಲಿ ಸತತ ಆರು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ದೀರ್ಘ ಗೆಲುವಿನ ದಾಖಲೆಯನ್ನು ನಿರ್ಮಿಸಿದೆ.

2024ರ ಆವೃತ್ತಿಯ ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಸ್ಮೃತಿ ಮಂಧಾನ ಬಳಗವು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಫೈನಲ್‌ನಲ್ಲಿ ತನ್ನ ಸ್ಥಾನ ಗಿಟ್ಟಿಸಿಕೊಳ್ಳಲು ತನ್ನ ಕೊನೆಯ ಮೂರು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ ಗಳಿಸುವ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News