×
Ad

IPL ಮೆಗಾ ಹರಾಜು | 27 ಕೋಟಿ ರೂ.ಗೆ ಲಕ್ನೋ ಪಾಲಾದ ರಿಷಬ್‌ ಪಂತ್

Update: 2024-11-24 16:44 IST

Photo : PTI

ಜಿದ್ದಾ (ಸೌದಿ ಅರೇಬಿಯ) : ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯುತ್ತಿರುವ ಐಪಿಎಲ್‌ ಮೆಗಾ ಹರಾಜಿನಲ್ಲಿ ಭಾರತದ ಬ್ಯಾಟರ್ ವಿಕೆಟ್ ಕೀಪರ್ ರಿಷಬ್ ಪಂತ್ ಅವರು 27 ಕೋಟಿ ರೂ. ಗೆ ಹರಾಜಾಗಿದ್ದಾರೆ. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಬೆಲೆಗೆ ಹರಾಜಾದ ಆಟಗಾರ ಎನಿಸಿಕೊಂಡಿದ್ದಾರೆ.

ಮೂಲ ಬೆಲೆ 2 ಕೋಟಿ ರೂ ವಿನಿಂದ ಪ್ರಾರಂಭವಾದ ಹರಾಜಿನಲ್ಲಿ ರಿಷಬ್ ಗೆ ಆರಂಭದಿಂದಲೇ ಬೇಡಿಕೆ ಹೆಚ್ಚಾಯಿತು. ತೀವ್ರ ಪೈಪೋಟಿಯಲ್ಲಿ ರಿಷಬ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ 22 ಕೋಟಿ ರೂ.ವರೆಗೆ ಉಳಿಸಿಕೊಳ್ಳುವ ಪ್ರಯತ್ನ ನಡೆಸಿತು. ಕೊನೆಗೆ ಲಕ್ನೋ ತಂಡವು ಆರ್ ಟಿ ಎಂ ಬಳಸಿ ರಿಷಬ್ ಅವರನ್ನು 27 ಕೋಟಿ ರೂ.ವಿಗೆ ತನ್ನದಾಗಿಸಿಕೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News