×
Ad

ರೋವಿಂಗ್ | ಬಲರಾಜ್ ಪನ್ವಾರ್ ಗೆ 23ನೇ ಸ್ಥಾನ

Update: 2024-08-02 20:45 IST

ಬಲರಾಜ್ ಪನ್ವಾರ್ | PC : olympics.com

ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ನ ರೋವಿಂಗ್ ನ ಪುರುಷರ ಸಿಂಗಲ್ಸ್ ಸ್ಕಲ್ಸ್ ಸ್ಪರ್ಧೆಯ ಫೈನಲ್ ಡಿನಲ್ಲಿ 5ನೇ ಸ್ಥಾನ ಪಡೆದ ನಂತರ ಭಾರತದ ಬಲರಾಜ್ ಪನ್ವ್ವಾರ್ ಒಟ್ಟಾರೆ 23ನೇ ಸ್ಥಾನದೊಂದಿಗೆ ತನ್ನ ಅಭಿಯಾನ ಮುಗಿಸಿದರು.

ಪ್ಯಾರಿಸ್ ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಏಕೈಕ ರೋವರ್ ಆಗಿರುವ ಬಲರಾಜ್ 7:02.37 ಸೆಕೆಂಡ್ ನಲ್ಲಿ ಗುರಿ ತಲುಪಿ ಫೈನಲ್ ಡಿನಲ್ಲಿ 5ನೇ ಸ್ಥಾನ ಪಡೆದರು.

33 ರೋವರ್ ಗಳು ಸ್ಪರ್ಧಿಸಿರುವ ಪುರುಷರ ಸಿಂಗಲ್ಸ್ ಸ್ಕಲ್ಸ್ ಸ್ಪರ್ಧೆಯಲ್ಲಿ ಹರ್ಯಾಣದ ಬಲರಾಜ್ 23ನೇ ಸ್ಥಾನ ಪಡೆದಿರುವುದು ನಿರಾಶಾದಾಯಕವಾಗಿದೆ. ಆದರೆ ಭಾರತೀಯ ಯೋಧ ಬಲರಾಜ್ ಒಲಿಂಪಿಕ್ಸ್ ಅಭಿಯಾನದುದ್ದಕ್ಕೂ ತನ್ನ ಪ್ರದರ್ಶನ ಮಟ್ಟವನ್ನು ಸುಧಾರಿಸಿಕೊಳ್ಳುತ್ತಾ ಸಾಗಿದ್ದಾರೆ.

ಕಳೆದ ಶನಿವಾರ 6 ರೋವರ್ಗಳಿದ್ದ ಹೀಟ್-1ರಲ್ಲಿ 7:07.11 ಸೆಕೆಂಡ್ನಲ್ಲಿ ಗುರಿ ತಲುಪಿ 4ನೇ ಸ್ಥಾನ ಪಡೆದಿದ್ದರು. ರಿಪಿಚೇಜ್ ಮೂಲಕ ಕ್ವಾರ್ಟರ್ ಫೈನಲ್ಗೆ ತಲುಪಿದ್ದ ಬಲರಾಜ್ ಅವರು ರಿಪಿಚೇಜ್-2ರಲ್ಲಿ 7:12.41 ಸೆಕೆಂಡ್ನಲ್ಲಿ ಗುರಿ ತಲುಪಿ 2ನೇ ಸ್ಥಾನ ಪಡೆದಿದ್ದರು.

ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ರೇಸ್ನಲ್ಲಿ ಬಲರಾಜ್ 7:05.10 ಸೆಕೆಂಡ್ನಲ್ಲಿ ಗುರಿ ತಲುಪಿ ಐದನೇ ಸ್ಥಾನ ಪಡೆದು ಪದಕದ ಸ್ಪರ್ಧೆಯಿಂದ ಹೊರಬಿದ್ದರು. ಆದರೆ ಒಲಿಂಪಿಕ್ಸ್ ರೋಯಿಂಗ್ ಸ್ಪರ್ಧೆಗಳಲಿ ಎಲ್ಲ ದೋಣಿಗಳು ಶ್ರೇಯಾಂಕವನ್ನು ಹೊಂದಿರುವುದರಿಂದ 13ರಿಂದ 24ರ ನಡುವೆ ಅತ್ಯುತ್ತಮ ಮುಕ್ತಾಯಕ್ಕಾಗಿ ಸ್ಪರ್ಧಿಸಲು ಬಲರಾಜ್ ಸೆಮಿ ಫೈನಲ್ ಸಿ/ಡಿ ರೇಸ್ಗೆ ಪ್ರವೇಶಿಸಿದರು.

ಸೆಮಿ ಫೈನಲ್ ಸಿ/ಡಿ ರೇಸ್ನಲ್ಲಿ 7:04.97 ಸೆಕೆಂಡ್ನಲ್ಲಿ ಗುರಿ ತಲುಪಿ ಆರನೇ ಸ್ಥಾನ ಪಡೆದಿದ್ದರೂ ಫೈನಲ್ ಡಿಯಲ್ಲಿ ಹಿನ್ನಡೆ ಕಂಡರು.

ಬಲರಾಜ್ ಕಳೆದ ವರ್ಷ ಏಶ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕದಿಂದ ವಂಚಿತರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News