×
Ad

ಸಮರ್ಥ ಚಾಂಪಿಯನ್‌ ಶಿಪ್ ಟ್ರೋಫಿ | ಭಾರತದ ಅಂಧರ ಕ್ರಿಕೆಟ್ ತಂಡಕ್ಕೆ ಭರ್ಜರಿ ಜಯ

Update: 2025-05-15 22:28 IST

ಹೊಸದಿಲ್ಲಿ: ಸಮರ್ಥ್ ಚಾಂಪಿಯನ್‌ ಶಿಪ್ ಟ್ರೋಫಿಗಾಗಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 4ನೇ ಟಿ20 ಪಂದ್ಯವನ್ನು ಭಾರತದ ಅಂಧರ ಕ್ರಿಕೆಟ್ ತಂಡವು 171 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 243 ರನ್ ಗಳಿಸಿತು. ಸೋನು ರಾವತ್ ಹಾಗೂ ದಿನೇಶ್ ರಾತ್ವ 180 ರನ್‌ಗಳ ಜೊತೆಯಾಟದಿಂದ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಬೃಹತ್ ಮೊತ್ತ ಕಲೆ ಹಾಕಿತು.

ಕಠಿಣ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ ತಂಡ 13.2 ಓವರ್ ಗಳಲ್ಲಿ ಕೇವಲ 72 ರನ್ ಗಳಿಸುವಷ್ವರಲ್ಲಿ ತನ್ನ ಎಲ್ಲಾ 10 ವಿಕೆಟ್ ಗಳನ್ನು ಕಳೆದುಕೊಂಡು ಸತತ 4ನೇ ಪಂದ್ಯ ಸೋತಿತು. ಶುಕ್ರವಾರ 5ನೇ ಹಾಗೂ ಕೊನೆಯ ಪಂದ್ಯ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News