×
Ad

ದ್ವಿತೀಯ ಟೆಸ್ಟ್ | ಅನಪೇಕ್ಷಿತ ದಾಖಲೆ ನಿರ್ಮಿಸಿದ ದಕ್ಷಿಣ ಆಫ್ರಿಕಾ ಬ್ಯಾಟರ್‌ ಗಳು

Update: 2025-11-22 21:30 IST

Photo Credit : PTI 

ಗುವಾಹಟಿ, ನ.22: ದಕ್ಷಿಣ ಆಫ್ರಿಕಾ ತಂಡವು ದ್ವಿತೀಯ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಅನಪೇಕ್ಷಿತ ದಾಖಲೆಯೊಂದನ್ನು ನಿರ್ಮಿಸಿದೆ.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅಗ್ರ ಸರದಿಯ ನಾಲ್ವರು ಬ್ಯಾಟರ್‌ಗಳು ಅರ್ಧಶತಕವನ್ನು ಗಳಿಸುವಲ್ಲಿ ವಿಫಲರಾಗಿದ್ದಾರೆ. ಎಲ್ಲ ನಾಲ್ಕೂ ಆಟಗಾರರು ಕನಿಷ್ಠ 35 ರನ್ ಗಳಿಸುವಲ್ಲಿ ಶಕ್ತರಾಗಿದ್ದಾರೆ.

ಇನಿಂಗ್ಸ್ ಆರಂಭಿಸಿದ ಮರ್ಕ್ರಮ್ ಹಾಗೂ ರಿಕೆಲ್ಟನ್ ಕ್ರಮವಾಗಿ 38 ಹಾಗೂ 35 ರನ್ ಗಳಿಸಿದ್ದರು. ಇಬ್ಬರು ಎರಡು ಓವರ್‌ಗಳ ಅಂತರದಲ್ಲಿ ಔಟಾದರು. ಟ್ರಿಸ್ಟನ್ ಸ್ಟಬ್ಸ್ 49 ರನ್ ಹಾಗೂ ಟೆಂಬಾ ಬವುಮಾ 41 ರನ್ ಗಳಿಸಿ ಇನಿಂಗ್ಸ್‌ಗೆ ಜೀವ ತುಂಬಿದ್ದಾರೆ .ಸ್ಟಬ್ಸ್ ಕೇವಲ 1 ರನ್‌ನಿಂದ ತನ್ನ ಚೊಚ್ಚಲ ಅರ್ಧಶತಕದಿಂದ ವಂಚಿತರಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News