×
Ad

ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಿದ ಶಾರ್ದೂಲ್‌ ಠಾಕೂರ್‌, ರಚಿನ್‌ ರವೀಂದ್ರ

Update: 2023-12-19 14:32 IST

 ಶಾರ್ದೂಲ್‌ ಠಾಕೂರ್‌, ರಚಿನ್‌ ರವೀಂದ್ರ ( Photo: BCCI/PTI)

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2024ರ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ‌ ಶಾರ್ದೂಲ್‌ ಠಾಕೂರ್‌ 4 ಕೋಟಿ ರೂ. ಗೆ ಹಾಗೂ ಕಿವೀಸ್‌ ಆಲ್‌ ರೌಂಡರ್‌ ರಚಿನ್‌ ರವೀಂದ್ರ 1.80 ಕೋಟಿ ರೂ.ಗೆ ಚೆನ್ನೈ ಪಾಲಾಗಿದ್ದಾರೆ.

ವನಿಂದು ಹಸರಂಗ ಅವರನ್ನು 1.50 ಕೋಟಿ ರೂ. ಗೆ ಹೈದರಾಬಾದ್‌ ಖರೀದಿಸಿದರೆ, ಅಝ್ಮತುಲ್ಲಾ ಓಮರ್ಝೈ ಅವರನ್ನು ಗುಜರಾತ್‌ ಟೈಟನ್ಸ್‌ 50 ಲಕ್ಷಕ್ಕೆ ಖರೀದಿಸಿದೆ. ದಕ್ಷಿಣ ಆಫ್ರಿಕಾ ಆಲ್‌ ರೌಂಡರ್ ಜೆರಾಲ್ಡ್‌ ‌ಕೊಯಿಟ್ಝಿ 5 ಕೋಟಿ ರೂ ಗೆ ಮುಂಬೈ ಸೇರ್ಪಡೆಯಾಗಿದ್ದಾರೆ. 

ಹರ್ಷಲ್‌ ಪಟೇಲ್‌ ರನ್ನು ಪಂಜಾಬ್‌ ಕಿಂಗ್ಸ್‌ 11.75 ಕೋಟಿ ರೂ. ನೀಡಿ ಖರೀದಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News