200 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆ: ಶ್ರೀಹರಿ ನಟರಾಜ್‌ಗೆ ಚಿನ್ನ
Update: 2025-06-02 21:53 IST
ಶ್ರೀಹರಿ ನಟರಾಜ್ | PC : X
ಸಿಂಗಾಪುರ: 20ನೇ ಆವೃತ್ತಿಯ ಸಿಂಗಾಪುರ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಒಲಿಂಪಿಯನ್ ಶ್ರೀಹರಿ ನಟರಾಜ್ ಪುರುಷರ 200 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆಯನ್ನು ಮೀರಿಸುವ ಸಮಯದೊಂದಿಗೆ ಚಿನ್ನ ಗೆದ್ದಿದ್ದಾರೆ.
ಸಿಂಗಾಪುAರ ಸ್ಪೋರ್ಟ್ಸ್ ಸ್ಕೂಲ್‌ನಲ್ಲಿ ರವಿವಾರ ನಡೆದ ಸ್ಪರ್ಧೆಯಲ್ಲಿ 24 ವರ್ಷದ ಶ್ರೀಹರಿ ಒಂದು ನಿಮಿಷ 48.66 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಇದರೊಂದಿಗೆ ಅವರು 2021ರಲ್ಲಿ ಸಾಜನ್ ಪ್ರಕಾಶ್ ಸ್ಥಾಪಿಸಿದ್ದ ಒಂದು ನಿಮಿಷ 49.73 ಸೆಕೆಂಡ್‌ನ ರಾಷ್ಟ್ರೀಯ ದಾಖಲೆಯನ್ನು ಹಿಂದಿಕ್ಕಿದರು.
ಇದಕ್ಕೂ ಮೊದಲು, ನಟರಾಜ್ 100 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಗೆದಿದ್ದರು