×
Ad

ನೂರ್ ಅಹ್ಮದ್ ಕ್ರೀಸ್ ತೊರೆದಿದ್ದರೂ ರನೌಟ್ ಮನವಿ ಹಿಂಪಡೆದ ಸ್ಟೀವ್ ಸ್ಮಿತ್

Update: 2025-02-28 21:15 IST

PC : X 

ಲಾಹೋರ್: ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಶುಕ್ರವಾರ ನಡೆದ ಪಂದ್ಯದ ವೇಳೆ ಅಫ್ಘಾನಿಸ್ತಾನದ ಆಟಗಾರ ನೂರ್ ಅಹ್ಮದ್ ಅವರು ಬೇಗನೆ ಕ್ರೀಸ್ ತೊರೆದಿದ್ದರೂ ಆಸ್ಟ್ರೇಲಿಯ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್ ರನೌಟ್ ಮನವಿಯನ್ನು ಹಿಂಪಡೆದಿದ್ದಾರೆ.

47ನೇ ಓವರ್‌ನ ಕೊನೆಯ ಎಸೆತದಲ್ಲಿ ನೂರ್ ಅಹ್ಮದ್ ಅವರು ಓವರ್ ಪೂರ್ಣಗೊಂಡಿದೆ ಎಂದು ತಪ್ಪಾಗಿ ಭಾವಿಸಿ ಕ್ರೀಸ್‌ನಿಂದ ಹೊರಗಿದ್ದರು. ಆಗ ವಿಕೆಟ್‌ಕೀಪರ್ ಜೋಶ್ ಇಂಗ್ಲಿಸ್ ಬೈಲ್ಸ್ ಅನ್ನು ಕೆಡವಿ ರನೌಟ್‌ಗಾಗಿ ಮನವಿ ಮಾಡಿದರು. ಆದರೆ, ಸ್ಮಿತ್ ಅವರು ಮನವಿಯನ್ನು ಪರಿಗಣಿಸದಂತೆ ಅಂಪೈರ್‌ಗೆ ತಿಳಿಸಿದರು.

2023ರ ಆ್ಯಶಸ್ ಸರಣಿಯ ವೇಳೆ ಆಸ್ಟ್ರೇಲಿಯ ತಂಡ ಇಂತಹ ಘಟನೆಯಲ್ಲಿ ಭಾಗಿಯಾಗಿತ್ತು. ಆಗ ಲಾರ್ಡ್ಸ್ ಟೆಸ್ಟ್‌ನಲ್ಲಿ ಅಲೆಕ್ಸ್ ಕ್ಯಾರಿ ಅವರು ಜಾನಿ ಬೈರ್‌ಸ್ಟೋವ್‌ರನ್ನು ಔಟ್ ಮಾಡಿದ್ದರು. ಇಂಗ್ಲೆಂಡ್ ಆಟಗಾರ ಓವರ್ ಪೂರ್ಣಗೊಂಡಿದೆ ಎಂದು ಕ್ರೀಸ್ ಬಿಟ್ಟು ಹೊರಗಿದ್ದರು.

ಆಗ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ತಂಡದ ಉಳಿದ ಸದಸ್ಯರು ರನೌಟ್‌ಗೆ ಮನವಿ ಮಾಡಿದ್ದರು. ಮೈದಾನದಲ್ಲಿರುವ ಅಂಪೈರ್‌ಗಳ ನಡುವಿನ ಚರ್ಚೆಯ ನಂತರ ನಿರ್ಧಾರ ಎತ್ತಿ ಹಿಡಿಯಲಾಯಿತು. ಅಂತಿಮವಾಗಿ ಬೈರ್‌ಸ್ಟೋವ್ ಅವರನ್ನು ಔಟ್ ಎಂದು ತೀರ್ಮಾನಿಸಲಾಯಿತು.

ಈ ಔಟ್ ತೀರ್ಪಿನಿಂದ ಭಾರೀ ವಿವಾದ ಸೃಷ್ಟಿಯಾಗಿದ್ದು, 2-2ರಿಂದ ಅಂತ್ಯಗೊಂಡ ಐದು ಪಂದ್ಯಗಳ ಟೆಸ್ಟ್ ಸರಣಿಯುದ್ದಕ್ಕೂ ಚರ್ಚೆಗೆ ಗ್ರಾಸವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News