ಸುಭಾಸಿಶ್ ಬೋಸ್, ಸೌಮ್ಯಾ ಗುಗುಲೋತ್ ವರ್ಷದ ಫುಟ್ಬಾಲ್ ಆಟಗಾರರು
ಸುಭಾಸಿಶ್ ಬೋಸ್ | PC : X
ಹೊಸದಿಲ್ಲಿ: ಮೋಹನ್ ಬಾಗನ್ ತಂಡದ ನಾಯಕ ಸುಭಾಸಿಶ್ ಬೋಸ್ ಮತ್ತು ಸೌಮ್ಯಾ ಗುಗುಲೋತ್‍ರನ್ನು ಕ್ರಮವಾಗಿ ಭಾರತದ ವರ್ಷದ ಪುರುಷ ಮತ್ತು ಮಹಿಳಾ ಫುಟ್ಬಾಲ್ ಆಟಗಾರರು ಎಂಬುದಾಗಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‍ಎಫ್) ಶುಕ್ರವಾರ ಘೋಷಿಸಿದೆ.
ಅದೇ ವೇಳೆ, ಖಾಲಿದ್ ಜಮೀಲ್ ವರ್ಷದ ಪುರುಷರ ಕೋಚ್ ಪ್ರಶಸ್ತಿಯನ್ನು ಮತ್ತೊಮ್ಮೆ ಗೆದ್ದಿದ್ದಾರೆ. ಇಂಡಿಯನ್ ವಿಮೆನ್ಸ್ ಲೀಗ್‍ನಲ್ಲಿ ಶ್ರೀಭೂಮಿ ಫುಟ್ಬಾಲ್ ತಂಡವನ್ನು ಮೂರನೇ ಸ್ಥಾನದತ್ತ ಮುನ್ನಡೆಸಿರುವ ಸುಜಾತಾ ಕರ್ ವರ್ಷದ ಮಹಿಳೆಯರ ಕೋಚ್ ಆಗಿ ಹೊರಹೊಮ್ಮಿದ್ದಾರೆ.
ಎಐಎಫ್‍ಎಫ್ 2024-25 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ.
ವರ್ಷದ ಪುರುಷ ಆಟಗಾರ- ಸುಭಾಸಿಶ್ ಬೋಸ್ (ಮೋಹನ್ ಬಾಗನ್ ಸೂಪರ್ ಜಯಂಟ್)
ವರ್ಷದ ಮಹಿಳಾ ಆಟಗಾರ್ತಿ- ಸೌಮ್ಯಾ ಗುಗುಲೋತ್ (ಈಸ್ಟ್ ಬೆಂಗಾಲ್)
ವರ್ಷದ ಪುರುಷರ ಕೋಚ್- ಖಾಲಿದ್ ಜಮೀಲ್ (ಜಮ್ಶೆಡ್‍ಪುರ ಎಫ್‍ಸಿ)
ವರ್ಷದ ಮಹಿಳೆಯರ ಕೋಚ್- ಸುಜಾತಾ ಕರ್ (ಶ್ರೀಭೂಮಿ ಎಫ್‍ಸಿ)
ವರ್ಷದ ಪುರುಷ ಗೋಲ್‍ಕೀಪರ್- ವಿಶಾಲ್ ಕೈತ್ (ಮೋಹನ್ ಬಾಗನ್ ಸೂಪರ್ ಜಯಂಟ್)
ವರ್ಷದ ಮಹಿಳಾ ಗೋಲ್‍ಕೀಪರ್- ಪಂತೋಯಿ ಚಾನು (ಈಸ್ಟ್ ಬೆಂಗಾಲ್)
ವರ್ಷದ ಅತ್ಯಂತ ಭರವಸೆಯ ಪುರುಷ ಆಟಗಾರ: ಬ್ರಿಸನ್ ಫೆರ್ನಾಂಡಿಸ್ (ಎಫ್‍ಸಿ ಗೋವ)
ವರ್ಷದ ಅತ್ಯಂತ ಭರವಸೆಯ ಮಹಿಳಾ ಆಟಗಾರ್ತಿ: ತೊಯಿಬಿಸನ ಚಾನು
ವರ್ಷದ ಪುರುಷ ರೆಫರಿ: ವೆಂಕಟೇಶ ಆರ್.
ವರ್ಷದ ಮಹಿಳಾ ರೆಫರಿ: ಟೆಕ್ಚಮ್ ರಂಜಿತಾ ದೇವಿ
ವರ್ಷದ ಪುರುಷ ಸಹಾಯಕ ರೆಫರಿ: ವೈರಮುತ್ತು ಪಿ.
ವರ್ಷದ ಮಹಿಳಾ ಸಹಾಯಕ ರೆಫರಿ: ರಿಯೊಹ್ಲಾಂಗ್ ಧಾರ್