ಈಜು ಸ್ಪರ್ಧೆ: ಕರ್ನಾಟಕದ ನಟರಾಜ್ ಶ್ರೀಹರಿಗೆ 6ನೇ ಸ್ಥಾನ
Update: 2023-09-25 22:34 IST
photo: The New Indian express
ಹೊಸದಿಲ್ಲಿ: ಕರ್ನಾಟಕದ ಶ್ರೀಹರಿ ನಟರಾಜ್ ಅವರು ಏಶ್ಯನ್ ಕ್ರೀಡಾಕೂಟದ ಈಜು ಸ್ಪರ್ಧೆಯ ಪುರುಷರ 50 ಮೀ. ಬ್ಯಾಕ್ ಸ್ಟ್ರೋಕ್ ಸ್ಪರ್ಧೆಯಲ್ಲಿ 6ನೇ ಸ್ಥಾನ ಪಡೆದರು.
ಸೋಮವಾರ ನಡೆದ ಸ್ಪರ್ಧೆಯನ್ನು ಅವರು 25.39 ಸೆಕೆಂಡ್‌ನಲ್ಲಿ ಕೊನೆಗೊಳಿಸಿದರು. ಚೀನಾದ ಕ್ಸುಜಿಯಾವು(24.38 ಸೆ.) ಹಾಗೂ ವಾಂಗ್ ಗುಕೈಲಾಯ್(24.88 ಸೆ.)ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಜಯಿಸಿದರು.
ಶ್ರೀಹರಿ ಹೀಟ್ಸ್‌ನಲ್ಲಿ 25.43 ಸೆಕೆಂಡ್ ಸಾಧನೆಯೊಂದಿಗೆ ಫೈನಲ್‌ನಲ್ಲಿ ಸ್ಥಾನ ಪಡೆದಿದ್ದರು. ರವಿವಾರ ನಡೆದಿದ್ದ 100 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲೂ 6ನೇ ಸ್ಥಾನ ಪಡೆದಿದ್ದರು.