×
Ad

ಸೈಯದ್ ಮೋದಿ ಇಂಟರ್ನ್ಯಾಶನಲ್ ಬ್ಯಾಡ್ಮಿಂಟನ್ ಪಂದ್ಯಾವಳಿ | ಟ್ರೀಸಾ-ಗಾಯತ್ರಿ ಜೋಡಿಗೆ ಮಹಿಳಾ ಡಬಲ್ಸ್ ಪ್ರಶಸ್ತಿ

ಪುರುಷರ ಸಿಂಗಲ್ಸ್‌ ನಲ್ಲಿ ಶ್ರೀಕಾಂತ್ಗೆ ಮತ್ತೆ ನಿರಾಶೆ

Update: 2025-11-30 23:49 IST

 Photo Credit: Sandeep Saxena

ಲಕ್ನೋ, ನ. 30: ಲಕ್ನೋದಲ್ಲಿ ನಡೆದ ಸೈಯದ್ ಮೋದಿ ಇಂಟರ್ನ್ಯಾಶನಲ್ ಸೂಪರ್ 300 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ರವಿವಾರ ಭಾರತೀಯ ಜೋಡಿ ಟ್ರೀಸಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದಾರೆ. ಆದರೆ, ಎಂಟು ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸುವ ಕಿಡಂಬಿ ಶ್ರೀಕಾಂತ್‌ ರ ಆಶೆ ಕೈಗೂಡಲಿಲ್ಲ.

ಮಹಿಳೆಯರ ಡಬಲ್ಸ್ ಫೈನಲ್ ನಲ್ಲಿ, ಟ್ರೀಸಾ ಮತ್ತು ಗಾಯತ್ರಿ ಮೊದಲ ಗೇಮ್ನ ಹಿನ್ನಡೆಯಿಂದ ಹೊರಬಂದು ಜಪಾನ್ ನ ಕಹೊ ಒಸಾವ ಮತ್ತು ಮಾಯಿ ತನಬೆ ಜೋಡಿಯನ್ನು 17-21, 21-13, 21-15 ಗೇಮ್‌ ಗಳಿಂದ ಹಿಮ್ಮೆಟ್ಟಿಸಿದರು. ಒಂದು ಗಂಟೆ 16 ನಿಮಿಷಗಳ ಕಾಲ ನಡೆದ ರೋಚಕ ಪಂದ್ಯದಲ್ಲಿ ಉಭಯ ಜೋಡಿಗಳು ಪ್ರಾಬಲ್ಯಕ್ಕಾಗಿ ಜಿದ್ದಾಜಿದ್ದಿನ ಹೋರಾಟ ನೀಡಿದವು.

ಪುರುಷರ ಸಿಂಗಲ್ಸ್‌ ನಲ್ಲಿ ಮಾಜಿ ಚಾಂಪಿಯನ್ ಹಾಗೂ 2021ರ ವಿಶ್ವ ಚಾಂಪಿಯನ್ಶಿಪ್ಸ್ ಬೆಳ್ಳಿ ಪದಕ ವಿಜೇತ ಶ್ರೀಕಾಂತ್‌ ರನ್ನು ಹಾಂಕಾಂಗ್ನ ಜಾಸನ್ ಗುಣವಾನ್ 21-16, 8-21, 22-20 ಗೇಮ್‌ ಗಳಿಂದ ಸೋಲಿಸಿದರು.

67 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ, 32 ವರ್ಷದ ಶ್ರೀಕಾಂತ್ ಪ್ರಬಲ ಹೋರಾಟ ನೀಡಿದರೂ ಎದುರಾಳಿಯನ್ನು ಮಣಿಸಲು ಅದು ಸಾಕಾಗಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News