×
Ad

ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ : ಆರಂಭಿಕನಾಗಿ ಮಿಂಚಿದ ಸಂಜು ಸ್ಯಾಮ್ಸನ್

Update: 2025-11-30 22:50 IST

Photo credit: X

ಲಕ್ನೋ, ನ. 30: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯಾವಳಿಯಲ್ಲಿ, ಕೇರಳದ ಪರವಾಗಿ ಆಡುತ್ತಿರುವ ಸಂಜು ಸ್ಯಾಮ್ಸನ್ ತನ್ನ ನೆಚ್ಚಿನ ಆರಂಭಿಕ ಸ್ಥಾನಕ್ಕೆ ಮರಳಿದ್ದಾರೆ. ಲಕ್ನೋದಲ್ಲಿ ರವಿವಾರ ನಡೆದ ಛತ್ತೀಸ್‌ ಗಢ ವಿರುದ್ಧದ ‘ಎ’ ಗುಂಪಿನ ಪಂದ್ಯದಲ್ಲಿ ಅವರು ಐದು ಸಿಕ್ಸರ್ಗಳಿಂದ ಕೂಡಿದ 43 ರನ್‌ ಗಳನ್ನು ಕೇವಲ 15 ಎಸೆತಗಳಲ್ಲಿ ಗಳಿಸಿದ್ದಾರೆ.

ಈ ಪಂದ್ಯದಲ್ಲಿ ಕೇರಳವು ಛತ್ತೀಸ್‌ ಗಢ ತಂಡವನ್ನು ಎಂಟು ವಿಕೆಟ್ ಗಳ ಭರ್ಜರಿ ಅಂತರದಿಂದ ಸೋಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಛತ್ತೀಸ್‌ ಗಢ 19.5 ಓವರ್ಗಳಲ್ಲಿ ಕೇವಲ 120 ರನ್‌ ಗಳನ್ನು ಗಳಿಸಿತು. ಪಂಜಾಬ್ ಕಿಂಗ್ಸ್ ತಂಡದ ಬ್ಯಾಟರ್ ಶಶಾಂಕ್ ಸಿಂಗ್ ಶೂನ್ಯಕ್ಕೆ ಮರಳಿದರು. ಸಂಜೀತ್ ದೇಸಾಯಿ ಮಾತ್ರ 23 ಎಸೆತಗಳಲ್ಲಿ 35 ರನ್‌ ಗಳನ್ನು ಗಳಿಸಿದರು.

ಕೇರಳ ಪರವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ವೇಗಿ ಕೆ.ಎಮ್. ಆಸಿಫ್ ಕೇವಲ 16 ರನ್‌ ಗಳನ್ನು ಕೊಟ್ಟ ಮೂರು ವಿಕೆಟ್ಗಳನ್ನು ಉರುಳಿಸಿದರು.

ಸುಲಭ ಗುರಿಯನ್ನು ಬೆನ್ನತ್ತಿದ ಕೇರಳ ಕೇವಲ 10.4 ಓವರ್ಗಳಲ್ಲಿ ಜಯವನ್ನು ಘೋಷಿಸಿತು. ಕೇರಳದ ರನ್ ಬೇಟೆಯ ನೇತೃತ್ವವನ್ನು ಸ್ಯಾಮ್ಸನ್ ವಹಿಸಿದರು.

ಏಶ್ಯ ಕಪ್ ಬಳಿಕ, ಭಾರತೀಯ ತಂಡದಲ್ಲಿ ಸ್ಯಾಮ್ಸನ್ರನ್ನು ಆರಂಭಿಕ ಕ್ರಮಾಂಕದಿಂದ ಕೆಳ ಕ್ರಮಾಂಕಕ್ಕೆ ದೂಡಲಾಗಿದೆ. ಆರಂಭಿಕರ ಸ್ಥಾನಗಳನ್ನು ಶುಭಮನ್ ಗಿಲ್ ಮತ್ತು ಅಭಿಶೇಕ್ ಶರ್ಮಾ ವಹಿಸಿಕೊಂಡಿದ್ದಾರೆ.

ಆದರೆ, ಮಧ್ಯಮ ಕ್ರಮಾಂಕದಲ್ಲಿ ಸ್ಯಾಮ್ಸನ್ ಯಾವತ್ತೂ ಖುಷಿಯಿಂದ ಇದ್ದಂತೆ ಕಂಡುಬಂದಿಲ್ಲ. ಆದರೆ ಛತ್ತೀಸ್‌ ಗಢ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಆಡಿ ತನ್ನ ಸಾಮರ್ಥ್ಯವನ್ನು ನಿರೂಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News