ಪೃಥ್ವಿ ಶಾ ಯಾಕೆ ಇನಿಂಗ್ಸ್ ಆರಂಭಿಸಲಿಲ್ಲ? ವಿವರಣೆ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌ ನ ಸೌರವ್ ಗಂಗುಲಿ

Update: 2024-03-28 16:05 GMT

ಪೃಥ್ವಿ ಶಾ | Photo: X 

ಹೊಸದಿಲ್ಲಿ : ಪಂಜಾಬ್ ಕಿಂಗ್ಸ್ ವಿರುದ್ಧದ ತನ್ನ ಮೊದಲ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನ ಆರಂಭಿಕ ಬ್ಯಾಟಿಂಗ್ ಜೋಡಿಯಾಗಿ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಶ್ರನ್ನು ಯಾಕೆ ಆರಿಸಲಾಯಿತು ಮತ್ತು ಪೃಥ್ವಿ ಶಾರನ್ನು ಯಾಕೆ ಹೊರಗಿಡಲಾಯಿತು ಎನ್ನುವುದಕ್ಕೆ ತಂಡದ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗುಲಿ ವಿವರಣೆ ನೀಡಿದ್ದಾರೆ.

ಪೃಥ್ವಿ ಶಾರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆಯಾದರೂ, ತಂಡದ ತಂತ್ರಗಾರಿಕೆಯ ಭಾಗವಾಗಿ ಆರಂಭಿಕ ಬ್ಯಾಟಿಂಗ್ ಸಂಯೋಜನೆಯಿಂದ ಅವರನ್ನು ಹೊರಗಿಡಲಾಗಿದೆ ಎಂದು ಅವರು ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಇನಿಂಗ್ಸ್ ಆರಂಭಿಸಲು ಮಾರ್ಶ್ ಮತ್ತು ವಾರ್ನರ್ರನ್ನು ಕಳುಹಿಸಿದ ನಿರ್ಧಾರವು ಹಲವು ಕ್ರಿಕೆಟ್ ಅಭಿಮಾನಿಗಳ ಹುಬ್ಬೇರಿಸಿತ್ತು. ಆರಂಭಿಕ ಬ್ಯಾಟರ್ ಆಗಿ ಪೃಥ್ವಿ ಶಾ ಸ್ಥಾನ ಭದ್ರವಾಗಿದೆ ಎಂದು ಸ್ಪಷ್ಟಪಡಿಸಿರುವ ಸೌರವ್, ಎಲ್ಲಾ ಆಟಗಾರರ ಬ್ಯಾಟಿಂಗ್ ಸಾಮರ್ಥ್ಯವನ್ನು ಶೋಧಿಸುವುದಕ್ಕಾಗಿ ಭಿನ್ನ ಬ್ಯಾಟಿಂಗ್ ಸಂಯೋಜನೆಯನ್ನು ಪರೀಕ್ಷಿಸಲಾಗುತ್ತಿದೆ ಎಂದರು.

‘‘ಪೃಥ್ವಿ ಶಾ ಆರಂಭಿಕ ಬ್ಯಾಟರ್. ಮಾರ್ಶ್ ಮತ್ತು ವಾರ್ನರ್ ಇನಿಂಗ್ಸ್ ಆರಂಭಿಸುತ್ತಾರೆ ಮತ್ತು ರಿಕಿ ಭುಯಿ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಾರೆ ಎಂದು ನಾವು ನಿರ್ಧರಿಸಿದೆವು. ಹಾಗಾಗಿ, ಅವರು ವಿಭಿನ್ನ ಕ್ರಮಾಂಕಗಳಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ನಾವು ಭಿನ್ನ ಆರಂಭಿಕ ಬ್ಯಾಟಿಂಗ್ ಸಂಯೋಜನೆಗೆ ಮುಂದಾದೆವು. ಅವರಿಬ್ಬರೂ ಆಸ್ಟ್ರೇಲಿಯದ ಆಟಗಾರರು. ಆ ದೇಶದ ತಂಡದಲ್ಲಿ ಅವರು ಆರಂಭಿಕರಾಗಿ ಆಡುತ್ತಾರೆ. ಅದು ಯಶಸ್ವಿಯಾಗಿದೆ ಕೂಡ. ಹಾಗಾಗಿ, ನಾವು ಈ ನಿರ್ಧಾರವನ್ನು ತೆಗೆದುಕೊಂಡೆವು’’ ಎಂದು ಅವರು ಹೇಳಿದರು.

ರಾಜಸ್ಥಾನ ರಾಯಲ್ಸ್ ವಿರುದ್ಧದ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೆ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News