×
Ad

ಸ್ನೂಕರ್ ಅಭ್ಯಾಸ ಮಾಡುತ್ತಿದ್ದಾಗ ವಿಶ್ವ ಚಾಂಪಿಯನ್ ಸ್ನೂಕರ್ ಆಟಗಾರನನ್ನು ಬಂಧಿಸಿದ ಪಾಕ್ ಪೊಲೀಸರು

Update: 2023-08-05 14:40 IST

File photo of Ahsan Ramzan | Instagram

ಲಾಹೋರ್ : ಪಾಕಿಸ್ತಾನದ 21 ವರ್ಷದೊಳಗಿನವರ ಸ್ನೂಕರ್ ವಿಶ್ವ ಚಾಂಪಿಯನ್ ಅಹ್ಸಾನ್ ರಂಝಾನ್ ಅವರು ತನಗಿಷ್ಟವಾದ ಸ್ನೂಕರ್ ಅಭ್ಯಾಸ ಮಾಡುತ್ತಿದ್ದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ತಾನು ಲಾಹೋರ್ನ ಟೌನ್ ಶಿಪ್ ನಲ್ಲಿರುವ ಸ್ನೂಕರ್ ಕ್ಲಬ್ನಲ್ಲಿದ್ದಾಗ ಸ್ಥಳೀಯ ಠಾಣೆಯ ಪೊಲೀಸರು ಗುರುವಾರ ಮಧ್ಯರಾತ್ರಿಯ ಹೊತ್ತಿಗೆ ಆವರಣಕ್ಕೆ ನುಗ್ಗಿ ನನ್ನನ್ನು ಮತ್ತು ಕ್ಲಬ್ ಮಾಲೀಕರನ್ನು ಬಂಧಿಸಿದರು ಎಂದು 17ರ ಹರೆಯದ ಸ್ನೂಕರ್ ತಿಳಿಸಿದರು.

"ನಾನು ವಿಶ್ವ ಚಾಂಪಿಯನ್ ಹಾಗೂ ಕ್ಲಬ್ನಲ್ಲಿ ಅಭ್ಯಾಸ ಮಾಡಬೇಕೆಂದು ನಾನು ಅವರಿಗೆ (ಪೊಲೀಸರಿಗೆ) ಹೇಳಿದೆ, ಆದರೆ ಯಾರೂ ನನ್ನ ಮಾತು ಕೇಳಲಿಲ್ಲ" ಎಂದು ಡಾನ್ ಪತ್ರಿಕೆಗೆ ರಂಝಾನ್ ತಿಳಿಸಿದರು.

ಕ್ಲಬ್ನಲ್ಲಿ "ಸೆಕ್ಯುರಿಟಿ ಕ್ಯಾಮೆರಾಗಳು ಮತ್ತು ಗಾರ್ಡ್ಗಳಿವೆ. ಅಲ್ಲಿದ್ದವರು ಕೇವಲ ಸ್ನೂಕರ್ ಆಡುತ್ತಿದ್ದರು ಮತ್ತು ಯಾವುದೇ ತಪ್ಪು ಮಾಡಿಲ್ಲ" ಎಂದು ಪೊಲೀಸರಿಗೆ ವಿವರಿಸಲು ಪ್ರಯತ್ನಿಸಿದ್ದೆ ಎಂದು ರಂಝಾನ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News