ಮೂರನೇ ಟೆಸ್ಟ್ : ಯಶಸ್ವಿ ದ್ವಿಶತಕಕ್ಕೆ ಇಂಗ್ಲೆಂಡ್ ಧೂಳೀಪಟ
Update: 2024-02-18 16:57 IST
Photo: X/@Crickskills
ರಾಜ್ ಕೋಟ್ : ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ 434 ರನ್ ಗಳ ಬೃಹತ್ ಅಂತರದ ಭರ್ಜರಿ ಜಯ ಸಾಧಿಸಿದೆ. ಇಂಗ್ಲೆಂಡ್ ವಿರುದ್ಧ ಅಜೇಯ 214 ರನ್ ಗಳಿಸಿದ ಯಶಸ್ವಿ ಜೈಸ್ವಾಲ್, ಪ್ರಸಕ್ತ ಸರಣಿಯಲ್ಲಿ ಎರಡನೇ ದ್ವಿಶತಕ ಬಾರಿಸಿ ಭಾರಿಸಿ ಯಶಸ್ಸು ಗಳಿಸಿದರು.
ಭರ್ಜರಿ ಜಯದೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತವು 2-1 ಮುನ್ನಡೆ ಸಾಧಿಸಿದೆ. ಎರಡನೇ ಇನ್ನಿಂಗ್ಸ್ ನಲ್ಲಿ 557 ರನ್ ಗಳ ಭಾರಿ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಭಾರತದ ಬೌಲಿಂಗ್ ದಾಳಿಗೆ ಸಿಲುಕಿ, ಕೇವಲ 122 ರನ್ ಗಳಿಗೆ ಆಲೌಟಾದರು. ಪಾದಾರ್ಪಣೆ ಪಂದ್ಯದಲ್ಲೇ ಇನ್ನೊಂದು ಅಮೋಘ ಇನ್ನಿಂಗ್ಸ್ ಆಟವಾಡಿದ ಸರ್ಫರಾಝ್ ಖಾನ್ 68 ರನ್ ಗಳಿಸಿ ಅಜೇಯರಾದರು.
ತಮ್ಮ ತವರಿನಲ್ಲಿ ನಡೆದ ಪಂದ್ಯದಲ್ಲಿ ರವೀಂದ್ರ ಜಡೇಜ 5 ವಿಕೆಟ್ ಪಡೆದು ಮಿಂಚಿದರು.