×
Ad

ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ

Update: 2023-07-23 23:39 IST

ಮೈಸೂರು,ಜು.23: ಡೆತ್ ನೋಟ್ ಬರೆದಿಟ್ಟು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಗೌಡನಹಳ್ಳಿಯಲ್ಲಿ ನಡೆದಿದೆ.

ನಿಸರ್ಗಾ ಮೃತ ಯುವತಿ. ನಿಸರ್ಗಾ ಕೆ.ಆರ್ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ಓದುತ್ತಿದ್ದಳು. ನಿಸರ್ಗಾಳಿಗೆ ಸುಹಾಸ್ ರೆಡ್ಡಿ ಎಂಬ ಯುವಕನ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿದೆ. ಆದರೆ ಇತ್ತೀಚೆಗೆ ಕೆಲದಿನಗಳಿಂದ ಸುಹಾಸ್ ವರ್ತನೆಯಲ್ಲಿ ಬದಲಾವಣೆ ಕಂಡಿದ್ದು, ಆತ ಮತ್ತೊಬ್ಬ ಯುವತಿಯೊಂದಿಗೆ ಸ್ನೇಹ ಬೆಳಸಿದ್ದನು ಎನ್ನಲಾಗಿದೆ.

ಇದರಿಂದ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ ನಿಸರ್ಗಾ ಡೆತ್ ನೋಟ್ ಬರೆದು ಇಲಿ ಪಾಷಾಣ ತೆಗೆದುಕೊಂಡಿದ್ದಾಳೆ. ಕೂಡಲೆ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ನಿಸರ್ಗಾ ಸಾವನ್ನಪ್ಪಿದ್ದಾಳೆ.

ಇನ್ನು ನಿಸರ್ಗಾ ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ಆರೋಪಿ ಸುಹಾಸ್ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News