×
Ad

‘ಏರೋ ಇಂಡಿಯಾ’: ಮೂರನೇ ತಲೆಮಾರಿನ ಎಚ್‍ಪಿಎಂ ವೆಪನ್ ಪ್ರದರ್ಶನ

Update: 2025-02-13 23:33 IST

ಬೆಂಗಳೂರು: ಯುದ್ದದ ಸಮಯದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುವ ಮೂರನೆ ತಲೆಮಾರಿನ ಮೈಕ್ರೋ ವೇವ್ ವೆಪನ್ ಸಿಸ್ಟಮ್ ಅನ್ನು ಖಾಸಗಿ ಸಂಸ್ಥೆಯೊಂದು ಅಭಿವೃದ್ಧಿಪಡಿಸಿದ್ದು, ಇಲ್ಲಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ‘ಏರೋ ಇಂಡಿಯಾ’ದ ಇಂಡಿಯನ್ ಪೆವಿಲಿಯನ್‍ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ವೇವ್‍ಸ್ಟ್ರೈಕ್-ಜೆನ್3 ಎಂಬ ಹೈ-ಪವರ್ ಮೈಕ್ರೊವೇವ್(ಎಚ್‍ಪಿಎಂ) ವೆಪನ್ ಸಿಸ್ಟಮ್ ಇದಾಗಿದ್ದು, ರಕ್ಷಣಾ ವಲಯದಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ಧಗೊಂಡಿದೆ. ಸುಧಾರಿತ ಇಮೇಜಿಂಗ್ ಮತ್ತು ಸಂವೇದಕ(ಸೆನ್ಸಾರ್) ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ಟ್ಯಾಂಬೋ ವೇವ್‍ಸ್ಟ್ರೈಕ್-ಜೆನ್3 ಅನ್ನು ಏರೋ ಇಂಡಿಯಾದಲ್ಲಿ ಪ್ರದರ್ಶನಕ್ಕೆ ಇಟ್ಟಿದೆ.

ವೇವ್‍ಸ್ಟ್ರೈಕ್-ಜೆನ್3 ರಕ್ಷಣಾ ವಲಯದ ನವೀನ ತಂತ್ರಜ್ಞಾನವನ್ನು ಹೊಂದಿದೆ. ಮಲ್ಟಿ-ಬೀಮ್ ಕ್ಲೈಸ್ಟ್ರಾನ್(ಎಂಬಿಕೆ) ತಂತ್ರಜ್ಞಾನವನ್ನು ವೆಪನ್ ಸಿಸ್ಟಮ್‍ನಲ್ಲಿ ಅಳವಡಿಸಲಾಗಿದೆ. ಅಲ್ಲದೆ, ಇದು ಕಾಂಪ್ಯಾಕ್ಟ್ ಮತ್ತು ಮೊಬೈಲ್ ವಿನ್ಯಾಸದೊಂದಿಗೆ ಕೆಲಸ ನಿರ್ವಹಿಸಲಿದೆ. ಡ್ರೋನ್‍ಗಳು ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ತಡೆದು ದ್ವಂಸ ಮಾಡಲು ವೇವ್‍ಸ್ಟ್ರೈಕ್-ಜೆನ್3 ಸಹಕಾರಿಯಾಗಿದೆ.

ವೇವ್‍ಸ್ಟ್ರೈಕ್-ಜೆನ್3 ಮೂರನೇ ತಲೆಮಾರಿನ ಹೈ-ಪವರ್ ಮೈಕ್ರೊವೇವ್(ಎಚ್‍ಪಿಎಂ) ವೆಪನ್ ಸಿಸ್ಟಮ್ ಹೊಂದಿದ್ದು, ಸಾಂಪ್ರದಾಯಿಕ ಕೌಂಟರ್‍ಗಳಾದ ಅಲ್ಟ್ರಾವೈಲೆಟ್(ಯುಎವಿ) ವ್ಯವಸ್ಥೆಗಳಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸಲಿದೆ. ವೇವ್‍ಸ್ಟ್ರೈಕ್ ನಲ್ಲಿ ಅಳವಡಿಸಿರುವ ಲೇಸರ್‍ಗಳು ಮತ್ತು ಚಲನಶೀಲ ಆಯುಧಗಳು ಭಿನ್ನವಾಗಿದ್ದು, ಎಲ್ಲ ಪರಿಸ್ಥಿತಿಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ಕಾಂಪ್ಯಾಕ್ಟ್ ಮತ್ತು ಸ್ಕೇಲೆಬಲ್ ವಿನ್ಯಾಸ ಹೊಂದಿರುವುದರಿಂದ ಯಾವುದೇ ಸನ್ನಿವೇಶದಲ್ಲಿ ವೇವ್‍ಸ್ಟ್ರೈಕ್-ಜೆನ್3 ವಿಶ್ವಾಸಾರ್ಹ ರಕ್ಷಣೆಯನ್ನು ಒದಗಿಸುತ್ತದೆ. ಸಿಸ್ಟಂನ ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್ ವಾಹನವು ಎತ್ತರದ, ವಾಯುಗಾಮಿ ಮತ್ತು ನೌಕೆಗಳಲ್ಲಿ ಸುಲಭವಾಗಿ ಬಳಸಲು ಸಹಕಾರಿಯಾಗುವಂತೆ ಸಿದ್ಧಗೊಂಡಿದೆ.

ವೇವ್‍ಸ್ಟ್ರೈಕ್‍ನಲ್ಲಿ ನಿಖರವಾದ ಗುರಿ ಸಾಧನೆಗಾಗಿ ಎಲೆಕ್ಟ್ರೋ-ಆಪ್ಟಿಕಲ್(ಇಓ) ಮತ್ತು ಟ್ರ್ಯಾಕ್ ರಾಡಾರ್‍ಗಳನ್ನು ಒಳಗೊಂಡಿದೆ. ಅಲ್ಲದೆ ಲೈಟ್ ಮೊಬಿಲಿಟಿ ವೆಹಿಕಲ್‍ಗೆ ಟ್ರೈಲರ್‍ಅನ್ನು ಅಳವಡಿಸಬಹುದಾಗಿದೆ. ಭೌತಿಕ ಹಾನಿಯಾಗದಂತೆ ಶತ್ರುಗಳ ಕಾರ್ಯತಂತ್ರವನ್ನು ನಿಯಂತ್ರಿಸಿ, ಮಿಲಿಟರಿ ಕಮಾಂಡರ್‍ಗಳಿಗೆ ಹೆಚ್ಚುವರಿ ಸಹಾಯ ಒದಗಿಸುತ್ತದೆ. ವಿಶೇಷವಾಗಿ ಇದು ಜ್ಯಾಮಿಂಗ್ ತಂತ್ರಜ್ಞಾನವನ್ನು ಹೊಂದಿದ್ದು, ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ನಿಷ್ಕ್ರಿಯಗೊಳಿಸುತ್ತದೆ.

ವೇವ್‍ಸ್ಟ್ರೈಕ್ ಕೇವಲ ಆಯುಧವಲ್ಲ, ಇದು ಬಹುಮುಖೀಯ ಶಕ್ತಿಯಾಗಿದೆ. ಇದರ ಕ್ಷಿಪ್ರ ಪ್ರತಿಕ್ರಿಯೆ ಸಾಮಥ್ರ್ಯ ಮತ್ತು ವಿಶಾಲ-ಸ್ಪೆಕ್ಟ್ರಮ್‍ನ ಪ್ರತಿಕ್ರಿಯೆಯು ಯುದ್ದದ ಬೆದರಿಕೆಗಳನ್ನು ನೇರವಾಗಿ ಪರಿಹರಿಸುತ್ತದೆ. ಅಲ್ಲದೆ ವೇವ್‍ಸ್ಟ್ರೈಕ್ ರಕ್ಷಣಾ ತಂತ್ರಜ್ಞಾನದಲ್ಲಿ ಭಾರತದ ಪ್ರಗತಿಯನ್ನು ಪ್ರದರ್ಶಿಸಿದೆ.

-ಅಂಕಿತ್ ಕುಮಾರ್, ಟೊನ್ಬೊ ಇಮೇಜಿಂಗ್‍ನ ಸಹ-ಸಂಸ್ಥಾಪಕ


Delete Edit


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News