×
Ad

ಬಾಬರಿ ಮಸೀದಿ ಧ್ವಂಸ ಸಂದರ್ಭದ ಹಿಂಸಾಚಾರ: ಹಳೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಆದೇಶ: ಗೃಹ ಸಚಿವ ಜಿ.ಪರಮೇಶ್ವರ್

Update: 2024-01-01 18:48 IST

ಬೆಂಗಳೂರು: ಬಾಬರಿ ಮಸೀದಿ ಧ್ವಂಸ ಸಂದರ್ಭದ ಹಿಂಸಾಚಾರ ಪ್ರಕರಣ ಸಂಬಂಧ ಹುಬ್ಬಳ್ಳಿಯಲ್ಲಿ ಓರ್ವ ಬಂಧನ ಮಾತ್ರವಲ್ಲದೆ, ಹಳೇ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಆದೇಶ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀರ್ಘಕಾಲ ಬಾಕಿ ಉಳಿದಿರುವ ಪ್ರಕರಣಗಳನ್ನು ಭೇದಿಸುವುದು ಪೊಲೀಸರ ನಿತ್ಯ ದಿನಚರಿ. ಈ ಸಂಬಂಧ ಈಗಾಗಲೇ ಆದೇಶ ನೀಡಿದ್ದು, ಹಳೇ ಪ್ರಕರಣಗಳನ್ನು ಗಂಭೀರವಾಗಿ ಪರಿಣಿಸುವಂತೆ ಹೇಳಲಾಗಿತ್ತು.ಅದರಂತೆ ಹುಬ್ಬಳ್ಳಿಯಲ್ಲಿ ಓರ್ವನನ್ನು ಬಂಧಿಸಿದ್ದಾರೆ ಎಂದರು.

ಕಾನೂನಿನ ಅಡಿಯಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಪ್ರಕರಣಕ್ಕೆ ಹಿಂದೂ ಕಾರ್ಯಕರ್ತರ ಬಣ್ಣವನ್ನು ಕಟ್ಟುವುದು ಸೂಕ್ತವಲ್ಲ.ಉದ್ದೇಶ ಪೂರಕವಾಗಿ ಯಾವುದನ್ನು ಮಾಡುತ್ತಿಲ್ಲ. ಕಾನೂನು ರೀತಿ ನಡೆಯುತ್ತಿದ್ದೇವೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News