×
Ad

ಬನ್ನೇರುಘಟ್ಟ ದಸರಾದ ಆನೆಯನ್ನು ಸಾಗಿಸುತ್ತಿದ್ದ ಲಾರಿ ತಮಿಳುನಾಡಿನಲ್ಲಿ ಅಪಘಾತ; ಚಾಲಕ ಸಾವು

Update: 2023-10-25 15:34 IST

ಆನೇಕಲ್,ಅ,25: ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ಅಂಬಾರಿ ಹೊತ್ತಿದ್ದ ಆನೆಯ ವಾಹನ ಹಳ್ಳಕ್ಕೆ ಹರಿದು ಲಾರಿ ಚಾಲಕ ಸಾವನ್ನಪ್ಪಿರುವ ಘಟನೆ ರಾಜ್ಯದ ಗಡಿಭಾಗ ತಮಿಳುನಾಡಿನ  ಸಾನಮಾವು ಬಳಿ ಹೊಸೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಚಾಲಕನನ್ನು ಆರೋಗ್ಯಸ್ವಾಮಿ(45) ಎಂದು ಗುರುತಿಸಲಾಗಿದೆ. ಚಾಲಕ ಹ್ಯಾಂಡ್ ಬ್ರೇಕ್ ಹಾಕದೆ ವಾಹನ ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ತೆರಳಿದ್ದಾಗ ಗಟನೆ ನಡೆದಿದೆ. ವಾಹನ ನಿಲ್ಲಿಸಿದ್ದ ಪ್ರದೇಶ ಇಳಿಜಾರಾಗಿದ್ದ ಕಾರಣ ವಾಹನ ಏಕಾಏಕಿ ಮುಂದಕ್ಕೆ ಚಲಿಸಿ ಹೋಗಲು ಆರಂಭಿಸಿದೆ. ತಡೆಯಲು ಮುಂದಾದ ಚಾಲಕನ ಮೇಲೆ ಲಾರಿ ಹರಿದಿದ್ದೇ ಸಾವಿಗೆ ಕಾರಣವಾಗಿದೆ.‌

ವಾಹನದಲ್ಲಿದ್ದ ಇತರ ಆರು ಮಂದಿಯಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ.  ಘಟನಾ ಸ್ಥಳಕ್ಕೆ ಹೊಸೂರಿನ ಅಡ್ಕೋ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಧಾವಿಸಿದ್ದು, ಕ್ರೇನ್ - ಜೆಸಿಬಿ ಮೂಲಕ  ಲಾರಿಯನ್ನು ಹೊರಕ್ಕೆ ಎಳೆಯಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News