×
Ad

ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮಾನಹಾನಿಕರ ಹೇಳಿಕೆ ಪ್ರಕರಣ | ಪೊಲೀಸ್ ವರದಿ ಪರಿಶೀಲಿಸಿ ಕ್ರಮ : ಬಸವರಾಜ ಹೊರಟ್ಟಿ

Update: 2024-12-29 21:10 IST

ಬಸವರಾಜ ಹೊರಟ್ಟಿ

ದಾವಣಗೆರೆ : ಬೆಳಗಾವಿ ಸದನದಲ್ಲಿ ನಡೆದ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಬ್ಬರೂ ದೂರು ನೀಡಿದ್ದಾರೆ. ಮೊದಲು ಕೊಟ್ಟವರ ದೂರು ಪರಿಶೀಲಿಸಿ, ಪೊಲೀಸರಿಗೆ ನೀಡಿದ್ದೇವೆ. ಪೊಲೀಸ್ ಇಲಾಖೆಯ ವರದಿ ಬಂದ ನಂತರ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬೈದಿರುವ ಸುದ್ದಿ ಮಾಧ್ಯಮಗಳಲ್ಲಿ ಬಂದಿರುವುದಾಗಿ ಹೇಳಿದ್ದಾರೆ. ಆದರೆ, ನಮಗೆ ಸದನದಲ್ಲಿರುವ ಕೌನ್ಸಿಲ್ ಟಿವಿ, ಸಿಸಿ ಕ್ಯಾಮರಾ, ಆಡಿಯೊದಲ್ಲಿರುವುದು ಅಧಿಕೃತವಾಗಿದೆ. ಈ ಘಟನೆಯನ್ನು ಸರಕಾರ ಸಿಬಿಐಗೆ ವಹಿಸುತ್ತೋ ಅಥವಾ ಯಾವ ತನಿಖೆಗೆ ಒಪ್ಪಿಸುತ್ತೋ ಗೊತ್ತಿಲ್ಲ. ಆದರೆ, ನಾನು ಡಿ.19ರವರೆಗೆ ಎಲ್ಲ ರೀತಿಯಲ್ಲಿ ಪರಿಶೀಲಿಸಿ ನನ್ನ ತೀರ್ಮಾನ ನೀಡಿದ್ದೇನೆ ಎಂದು ತಿಳಿಸಿದರು.

ಈ ವಿಚಾರ ಬೆಳೆಸುವುದು ಬೇಡ ಎಂದಿದ್ದೇನೆ. ಆದರೆ, ಅದನ್ನು ಬೆಳೆಸುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಇಬ್ಬರೂ ದೂರು ದಾಖಲಿಸಿದ್ದು, ಮೊದಲು ಕೊಟ್ಟವರ ದೂರನ್ನು ಪರಿಶೀಲಿಸಿ ಪೊಲೀಸರಿಗೆ ನೀಡಿದ್ದೇವೆ. ಪೊಲೀಸರ ವರದಿ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೊರಟ್ಟಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News