×
Ad

ಸಿಜೆಐ ಗವಾಯಿಯವರತ್ತ ಶೂ ಎಸೆದ ವಕೀಲನನ್ನು ಶ್ಲಾಘಿಸಿದ ಬಿಜೆಪಿ ಮುಖಂಡ ಭಾಸ್ಕರ ರಾವ್

Update: 2025-10-08 08:04 IST

ಬಿ.ಆರ್.ಗವಾಯಿ / ಭಾಸ್ಕರ ರಾವ್ (Photo:ndtv.com)

ಬೆಂಗಳೂರು: ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆದ ಪ್ರಕರಣವನ್ನು ಇಡೀ ದೇಶ ಒಕ್ಕೊರಲಿನಿಂದ ಖಂಡಿಸಿದ್ದರೆ, ಬಿಜೆಪಿ ಮುಖಂಡ ಮತ್ತು ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ ರಾವ್, ಈ ಕೃತ್ಯ ಎಸಗಿದ ವಕೀಲದ ಧೈರ್ಯವನ್ನು ಶ್ಲಾಘಿಸುವ ಮೂಲಕ ವಿವಾದಕ್ಕೀಡಾಗಿದ್ದಾರೆ.

"ಈ ನಿಲುವು ತೆಗೆದುಕೊಂಡು ಅದರೊಂದಿಗೆ ಜೀವಿಸುವ ನಿರ್ಧಾರ ಕೈಗೊಂಡ ಧೈರ್ಯವನ್ನು ಮೆಚ್ಚಬೇಕು" ಎಂದು ಭಾಸ್ಕರ ರಾವ್ ಅಭಿಪ್ರಾಯಪಟ್ಟಿದ್ದಾರೆ.

"ಇದು ಕಾನೂನಾತ್ಮಕವಾಗಿ ಮತ್ತು ಭಯಾನಕ ಪ್ರಮಾದವಾಗಿದ್ದರೂ, ಆತನ ಸಾಹಸವನ್ನು ನೀವು ಶ್ಲಾಘಿಸುತ್ತೀರಾ? ಮಾಜಿ ಐಪಿಎಸ್ ಅಧಿಕಾರಿ ಹಿನ್ನೆಲೆಯಿಂದ ಬಂದ ನಿಮಗೆ ಇದು ನಾಚಿಕೆಗೇಡು. ಒಮ್ಮೆ ಕಾನೂನು ಎತ್ತಿಹಿಡಿದಿದ್ದ ನೀವು, ಸಿಜೆಐಯನ್ನು ಅವಮಾನಿಸಿದ ವ್ಯಕ್ತಿಯನ್ನು ಸಮರ್ಥಿಸುತ್ತಿದ್ದೀರಿ.., ಎಂಥ ಪತನ! ಎಂದು ಕಾಂಗ್ರೆಸ್ ಮುಖಂಡ ಮನ್ಸೂರ್ ಖಾನ್ ಅವರು ಎಕ್ಸ್ ಪೋಸ್ಟ್ ನಲ್ಲಿ ಭಾಸ್ಕರ್ ರಾವ್ ವಿರುದ್ಧ ಚಾಟಿ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News