×
Ad

"ನಾನು ಬಾಯಿ ತೆರೆದ್ರೆ ಸರಕಾರ ಅಲ್ಲಾಡುತ್ತೆ": ಝಮೀರ್ ಅಹ್ಮದ್‌ರ ಆಪ್ತ ಕಾರ್ಯದರ್ಶಿ-ಶಾಸಕ ಬಿ.ಆರ್.ಪಾಟೀಲ್‌ರದ್ದು ಎನ್ನಲಾದ ಆಡಿಯೋದಲ್ಲೇನಿದೆ?

Update: 2025-06-20 16:06 IST

ಬಿ.ಆರ್.ಪಾಟೀಲ್‌/ಸರ್ಫರಾಝ್‌ ಖಾನ್

ಕಲಬುರಗಿ:"ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ದುಡ್ಡು ಕೊಟ್ಟವರಿಗಷ್ಟೇ ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ" ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆದ ಆಳಂದ ಶಾಸಕ ಬಿ.ಆರ್.ಪಾಟೀಲ್‌, ತಮ್ಮದೇ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗುತ್ತಿದೆ.

ವಸತಿ ಸಚಿವ ಝಮೀರ್ ಅಹ್ಮದ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಝ್‌ ಖಾನ್ ಎನ್ನಲಾದವರ ಜೊತೆ ಮೊಬೈಲ್‌ ನಲ್ಲಿ ಹಿಂದಿ ಬಾಷೆಯಲ್ಲಿ ಅವರು ಸಂಭಾಷಣೆ ನಡೆಸಿದ್ದಾರೆ.

ಈ ಆಡಿಯೋ ಸಂಭಾಷಣೆಯಲ್ಲಿ ಏನಿದೆ..? :

ಬಿ.ಆರ್.ಪಾಟೀಲ್ ಎನ್ನಲಾದವರು : ಸರ್ಪರಾಝ್ ಅವರೇ..

ಪಿಎಸ್ ಸರ್ಪರಾಝ್ ಖಾನ್ ಎನ್ನಲಾದವರು: ಹಾ ಸಾಬ್. ಹಾ ಸಾಬ್.

ಬಿ.ಆರ್.ಪಾಟೀಲ್: ನೀವು ತಪ್ಪು ತಿಳ್ಕೋಬೇಡಿ, ಆಶ್ಚರ್ಯ ವಿಚಾರ ಇದೆ, ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಯಾರು ದುಡ್ಡು ಕೊಡ್ತಾರೆ ಅವರಿಗೆ ಮನೆ ಸಿಕ್ಕಿದೆ, ಇದು ದಂಧೆ ಆಗ್ತಿದೆಯಾ ?.

ಸರ್ಪರಾಝ್ : ಹಾಗಾಗಿಲ್ಲ, ಹಾಗೇನಾದ್ರು ಇದ್ರೆ ಕೊಡಿ ಸರ್ ನಾನು ಕ್ರಮ ಕೈಗೊಳ್ಳುತ್ತೇನೆ. ಒಂದು ವೇಳೆ ಆ ರೀತಿ ಏನಾದರೂ ಇದ್ದರೆ ಅವರಿಗೆ ಜೈಲಿಗೆ ಕಳಿಸ್ತೇವೆ ಸರ್..

ಬಿ.ಆರ್.ಪಾಟೀಲ್ : ನಾನು ನಮ್ಮ ಸರಕಾರದ ಮೇಲೆ ಹೇಗೆ ಆರೋಪ ಮಾಡ್ತೇನಾ ? ನನ್ನ ಪ್ರಕಾರ ಯಾರು ದುಡ್ಡು ಕೊಟ್ಟಿದ್ದಾರೆ ಅವರಿಗೆ ಮನೆಗಳು ಸಿಕ್ಕಿವೆ.

ಪಿಎಸ್ ಸರ್ಪರಾಝ್ ಖಾನ್: ಸಾಧ್ಯನೇ ಇಲ್ಲ ಸರ್, ಮನೆಗಳೇ ಇಲ್ಲ ಅಂದ್ರೆ ಕೊಡೋಕೆ ಹೇಗೆ ಸಾಧ್ಯ ಸರ್.

ಬಿ.ಆರ್.ಪಾಟೀಲ್: ಎಷ್ಟು ಮನೆ ಕೊಟ್ಟಿದ್ದಿರಾ ?.

ಪಿಎಸ್ ಸರ್ಪರಾಝ್: ಕಳೆದ ವರ್ಷ 10-12 ಸಾವಿರ ಮನೆಗಳು ಶಾಸಕರ ಬೇಡಿಕೆಯಂತೆ ಕೊಟ್ಟಿದ್ದೇವೆ. ಎರಡು ವರ್ಷ ಹಿಂದೆ ಹೊಸ ಸರಕಾರ ರಚನೆ ಆದ ಬಳಿಕ ಸರ್. ನಮ್ಮಿಂದ 42 ಸಾವಿರ ಲ್ಯಾಪ್ಸ್ ಆಗಿರೋ ಮನೆಗಳ ಬೇಡಿಕೆ ಕೊಟ್ಟಿದ್ದೇವೆ.

ಬಿ.ಆರ್.ಪಾಟೀಲ್: ಕೇಳಿ, ನಾನು ಯಾರಿಗೂ ಹೇಳಿಲ್ಲ, ನಾನು ಕೊಟ್ಟಿರುವ ಲೇಟರ್ಗೆ ಮನೆಗಳು ಕೊಟ್ಟಿಲ್ಲ, ಅದೇ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ನಾನು ಕೊಟ್ಟಿರುವ ಲೆಟರ್ಗೆ ಹಣ ಕೊಟ್ಟು ಮನೆಗಳನ್ನು ತೆಗೆದುಕೊಂಡು ಬಂದಿದ್ದಾರೆ ಅವರು . ಹೀಗಾದ್ರೆ ನನ್ನ ಮರ್ಯಾದೆ ಹೇಗೆ ಇರುತ್ತೆ..

ಪಿಎಸ್ ಸರ್ಪರಾಝ್ ಖಾನ್: ಆ ಲೆಟರ್ ಕೊಡಿ ಸರ್ ನಾನು ಕ್ರಮ ಕೈಗೊಳ್ಳುತ್ತೇನೆ. ಯಾರು ಮಾಡಿದ್ದಾರೆ ಅವರಿಗೆ ಹ್ಯಾಂಗ್ ಮಾಡ್ತೇನೆ ಸರ್.

ಬಿ.ಆರ್.ಪಾಟೀಲ್: ಹ್ಯಾಂಗ್ ಒಬ್ಬರಿಗಲ್ಲ, ಬಹಳಷ್ಟು ಜನರಿಗೆ ಮಾಡಬೇಕಾಗುತ್ತೆ..

ಪಿಎಸ್ ಸರ್ಪರಾಝ್ ಖಾನ್: ಕೊಡಿ ಸರ್ ಏನಾದ್ರು ಇದ್ರೆ..ಪ್ಲೀಸ್ ಕೊಡಿ ಸರ್

ಬಿ.ಆರ್.ಪಾಟೀಲ್: ಉದಾಹರಣೆಗೆ ತೊಗೊಳ್ಳಿ ಧಂಗಾಪುರ ಗ್ರಾಮ ಪಂಚಾಯತ, ಹಾಂ ಸರ್ ಮತ್ತು ಕಡಗಂಚಿ, ಹಿತ್ತಲಶಿರೂರ್.

ಪಿಎಸ್ ಸರ್ಪರಾಝ್ ಖಾನ್: ಈಗ್ಲೇ ಚೆಕ್ ಮಾಡಿ ಹೇಳ್ತೇನೆ..ಸರ್

ಬಿ.ಆರ್.ಪಾಟೀಲ್: ಏನ್ ಚೆಕ್ ಮಾಡ್ತೀರಿ..? ನಮ್ಮ ಸಚಿವರು, ನಮ್ಮ ಪಾರ್ಟಿ ಸರಕಾರದ ಮೇಲೆ ಆರೋಪ ಮಾಡ್ತೀನಾ?

ಬಿ.ಆರ್.ಪಾಟೀಲ್: ಹಣ ಕೊಡುವ, ತಿನ್ನುವ ಸಾಕ್ಷಿಗಳಂತೂ ತೂ ಸಿಗಲ್ಲ... ತೊಗೊಂಡು ಹೋದವರು ಹೋದರೂ ....

ಪಿಎಸ್ ಸರ್ಪರಾಝ್ : ಇದರಲ್ಲಿ ಖಂಡಿತ ಸಾಕ್ಷಿ ಸಿಗುತ್ತೆ ಸರ್ ನಾನ ಚೆಕ್ ಮಾಡಿ ಹೇಳ್ತೇನೆ ಸರ್ ...

ಬಿ.ಆರ್.ಪಾಟೀಲ್: ನಮ್ಮ ಪಕ್ಕದ ಅಫಜಲಪುರ ಕ್ಷೇತ್ರದಲ್ಲಿ ಎಷ್ಟು ಮನೆಗಳು ಹಣ ಕೊಟ್ಟು ತಂದಿದ್ದಾರೆ.

ಪಿಎಸ್ ಸರ್ಪರಾಝ್ : ನಾನ್ ಚೆಕ್ ಮಾಡ್ತೇನೆ.... ಇಲ್ಲ ಸರ್ ರಾಜೀವ್ ಗಾಂಧಿ ನಿಗಮ ದಿಂದಲೇ ಚೆಕ್ ಮಾಡ್ತೇನೆ ಸರ್ ನಾನೂ..

ಬಿ.ಆರ್.ಪಾಟೀಲ್: ನಾನ್ ಚೆಕ್ ಮಾಡಿ ಕೊಡಲಾ?

ಪಿಎಸ್ ಸರ್ಪರಾಝ್ : ಪ್ಲೀಸ್ ಕೊಡಿ ಸರ್ ನಾನು ತಕ್ಷಣ ಕ್ರಮ ತೆಗೆದುಕೊಳ್ಳುತ್ತೇನೆ. ಮನೆಗಳೇನಾದ್ರೂ ಇದ್ರೆ ನಾನು ನಿಮಗೆ ಸ್ಯಾಂಕ್ಷನ್ ಮಾಡಿ ಕೊಡುತ್ತೇನೆ ಸರ್ 100% ಸರ್ ..

ಬಿ.ಆರ್.ಪಾಟೀಲ್: ಕೇಳಿ, ರಾಜೀವ್ ಗಾಂಧಿ-ಮುನ್ನಳ್ಳಿ- 200 ಮನೆಗಳು

ಪಿಎಸ್ ಸರ್ಪರಾಝ್. : ಹೊನ್ನಳ್ಳಿ ?

ಬಿ.ಆರ್.ಪಾಟೀಲ್: ಮುನ್ನಲ್ಲಿ .. ಮುನ್ನಲ್ಲಿ

ಪಿಎಸ್ ಸರ್ಪರಾಝ್ : ಮುನ್ನಲ್ಲಿ.. ಹಾಂ

ಬಿ.ಆರ್.ಪಾಟೀಲ್: ದರ್ಗಾಶಿರೂರ್ -100 ಮನೆಗಳು.

ಪಿಎಸ್ ಸರ್ಪರಾಝ್ : ದರ್ಗಾಶಿರೂರ್ .. ಹಾಂ

ಬಿ.ಆರ್.ಪಾಟೀಲ್: ಧಂಗಾಪುರ- ಬಿಆರ್ ಅಂಬೇಡ್ಕರ್-200 ಮನೆಗಳು,

ಬಿ.ಆರ್.ಪಾಟೀಲ್: ಕವಲಗಾ.

ಪಿಎಸ್ ಸರ್ಪರಾಝ್ : ಕವಲಗಾ ದಲ್ಲಿ ಎಷ್ಟು ಸರ್ ?

ಬಿ.ಆರ್.ಪಾಟೀಲ್: ಕವಲಗಾದಲ್ಲಿ 200

ಬಿ.ಆರ್.ಪಾಟೀಲ್: ಮಾಡಿಯಾಳ್ ದಲ್ಲಿ... 100 ಮತ್ತೆ 100

ಪಿಎಸ್ ಸರ್ಪರಾಝ್ : ಓಕೆ ಸರ್ ...

ಬಿ.ಆರ್.ಪಾಟೀಲ್ : ಒಟ್ಟಾಗಿ 950

ಪಿಎಸ್ ಸರ್ಪರಾಝ್ : : 950 ಮನೆಗಳು ..

ಬಿ.ಆರ್.ಪಾಟೀಲ್ : ಹಾಂ ...

ಪಿಎಸ್ ಸರ್ಪರಾಝ್ : ಅರ್ಧ ಗಂಟೆಲಿ ನಾನು ನಿಮಗೆ ಹೇಳ್ತೇನೆ ಸರ್

ಬಿ.ಆರ್.ಪಾಟೀಲ್ : ಇವರು ಹಣ ಕೊಟ್ಟು ತಂದಿದಾರೆ ಇವರು ...

ಪಿಎಸ್ ಸರ್ಪರಾಝ್ : ಚೆಕ್ ಮಾಡಿ ಹೇಳ್ತೇನೆ ಸರ್ ನಿಮಗೆ.

ಬಿ.ಆರ್.ಪಾಟೀಲ್: (ನಗು )ಏನ್ ಚೆಕ್ ಮಾಡ್ತಿರಿ , ನಾನು ಬಾಯಿ ತೆರೆದ್ರೆ ಸರ್ಕಾರ ಅಲ್ಲಾಡುತ್ತೆ..

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News