×
Ad

ಚಾಮರಾಜನಗರ: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ; ಮಹಿಳೆ ಮೃತ್ಯು

Update: 2023-11-16 13:22 IST

ಚಾಮರಾಜನಗರ: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ  ತಾಲ್ಲೂಕಿನ ಪುಣಜನೂರು ಸಮೀಪ  ನಡೆದಿದೆ.

ಮೃತ ಮಹಿಳೆಯನ್ನು ಬೂಡಿಪಡಗ (ರಂಗಸಂದ್ರ) ಗ್ರಾಮದ ರುಕ್ಕಿಬಾಯಿ (70)  ಎಂದು ಗುರುತಿಸಲಾಗಿದೆ.  ಪುಣಜನೂರು ಕಡೆಯಿಂದ ಚಾಮರಾಜನಗರ ಕಡೆಗೆ ಬರುತ್ತಿದ್ದ ಕೆ.ಎಸ್. ಆರ್. ಟಿ.ಸಿ ಬಸ್ ಮಹಿಳೆಗೆ ಢಿಕ್ಕಿ ಹೊಡೆದಿದೆ.

ರಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,ಬಸ್ ನಿಲ್ಲಿದ್ದ ಪ್ರಯಾಣಿಕರು ಬೇರೆ ಬಸ್ ನಲ್ಲಿ ಪ್ರಯಾಣಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News