×
Ad

ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ವಿಚಾರ | ಕ್ಷಮೆ ಕೇಳಲು ನಟ ಕಮಲ್ ಹಾಸನ್‌ಗೆ ಹೈಕೋರ್ಟ್ ಸೂಚನೆ

Update: 2025-06-03 12:54 IST

ಕಮಲ್ ಹಾಸನ್ | PC: x/@ikamalhaasan

ಬೆಂಗಳೂರು : ʼಕನ್ನಡ ತಮಿಳುನಿಂದ ಹುಟ್ಟಿದೆʼ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಬಳಿಕ ಕ್ಷಮೆ ಕೇಳಲು ನಿರಾಕರಿಸಿದ್ದ ತಮಿಳು ನಟ ಕಮಲ್ ಹಾಸನ್​ ಅವರನ್ನು ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶರು ತರಾಟೆ ತೆಗೆದುಕೊಂಡಿದ್ದಾರೆ.

ʼಥಗ್ ಲೈಫ್ʼ ಸಿನಿಮಾ ರಿಲೀಸ್​ಗೆ ಭದ್ರತೆ ಕೋರಿ ಕಮಲ್​ ಹಾಸನ್​ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ನ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ, ತಮಿಳು ನಟ ಕಮಲ್ ಹಾಸನ್‌ ರನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಕ್ಷಮೆ ಕೇಳಿದರೆ ಮಾತ್ರ ಅರ್ಜಿ ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ. ‘ಯಾವುದೋ ಭಾಷೆಯಿಂದ ಇನ್ನೊಂದು ಭಾಷೆ ಹುಟ್ಟಿದೆ ಅಂದರೆ ಹೇಗೆ? ಕನ್ನಡ ಭಾಷೆ ತಮಿಳಿಂದ ಹುಟ್ಟಿದೆ ಅನ್ನೋಕೆ ಅವರೇನು ಇತಿಹಾಸಕಾರರಾ? ಈ ಹಿಂದೆ ರಾಜಗೋಪಾಲಚಾರ್ಯ ಕೂಡ ಕ್ಷಮೆಯನ್ನು ಕೇಳಿದ್ದರು. ಇವತ್ತಿನ ಪರಿಸ್ಥಿತಿ ನಿರ್ಮಾಣಕ್ಕೆ ನೀವೇ ಕಾರಣ, ಈ ರೀತಿ ಹೇಳಿಕೆ ನೀಡಬಾರದು. ಕಮಲ್ ಹಾಸನ್ ಸಾಮಾನ್ಯ ವ್ಯಕ್ತಿ ಅಲ್ಲ, ಪಬ್ಲಿಕ್ ಫಿಗರ್​. ಅವರು ಮೊದಲು ಕ್ಷಮೆ ಕೇಳಲಿ, ಆಮೇಲೆ ಅರ್ಜಿ ಪರಿಗಣಿಸುತ್ತೇವೆ ಎಂದು ವಿಚಾರಣೆಯನ್ನು ಮಧ್ಯಾಹ್ನ 2:30 ಕ್ಕೆ ಮುಂದೂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News