ಡಿಸಿಇಟಿ: ಆಯ್ಕೆಗಳನ್ನು ದಾಖಲಿಸಲು ಲಿಂಕ್ ಬಿಡುಗಡೆ
Update: 2026-07-27 20:11 IST
ಬೆಂಗಳೂರು: ಡಿಪ್ಲೊಮಾ ಅಭ್ಯರ್ಥಿಗಳಿಗೆ ಲ್ಯಾಟರಲ್ ಪ್ರವೇಶದ ಮೂಲಕ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ಆಯ್ಕೆಗಳನ್ನು ದಾಖಲಿಸಲು ಕೆಇಎ ವೆಬ್‍ಸೈಟ್‍ನಲ್ಲಿ ಲಿಂಕ್ ಬಿಡುಗಡೆ ಮಾಡಲಾಗಿದೆ.
2026ನೇ ಸಾಲಿನಲ್ಲಿ ಡಿಪ್ಲೊಮ ಅಭ್ಯರ್ಥಿಗಳಿಗೆ ಲ್ಯಾಟರಲ್ ಇಂಜಿನಿಯರಿಂಗ್ ಪ್ರವೇಶಾತಿಗೆ ಮೊದಲನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಸರಕಾರದಿಂದ ಸೀಟ್ ಮ್ಯಾಟ್ರಿಕ್ಸ್ ಬಂದಿಲ್ಲದಿರುವುರಿಂದ, ಅಭ್ಯರ್ಥಿಗಳಿಗೆ ಆಪ್ಪನ್‍ಗಳನ್ನು ದಾಖಲಿಸಲು ಜು.27ರ ಬೆಳಗ್ಗೆ 11ರಿಂದ ಪ್ರಾರಂಭಿಸಲಾಗಿದೆ. ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕದ ವಿವರಗಳನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು.
ವೃತ್ತಿಪರ ಅಭ್ಯರ್ಥಿಗಳಿಗೆ ಆಪ್ಪನ್‍ಗಳನ್ನು ದಾಖಲಿಸಲು ದಿನಾಂಕದ ವಿವರಗಳನ್ನು ಸದ್ಯದಲ್ಲಿಯೇ ತಿಳಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟನೆಯಲ್ಲಿ ತಿಳಿಸಿದೆ.