ಕನ್ನಡ ಪುಸ್ತಕ ಪ್ರಾಧಿಕಾರದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟ
ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ/ಡಾ. ಶ್ರೀ ಚನ್ನವೀರ ಶಿವಾಚಾರ್ಯರು/ಡಾ.ರಾಮೇಗೌಡ (ರಾಗೌ)/ಎಂ. ರಾಜೇಶ್ವರಿ(ಪಲ್ಲವ ಪ್ರಕಾಶನ)
ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಗಳಿಗೆ ಗಣ್ಯರನ್ನು ಆಯ್ಕೆ ಮಾಡಲಾಗಿದೆ. ಇದರ ಜೊತೆಗೆ ಇದೇ ಮೊಟ್ಟಮೊದಲ ಬಾರಿಗೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಎರಡು ದತ್ತಿ ಬಹುಮಾನಗಳನ್ನು ಸಹ ನೀಡಲಾಗುತಿದ್ದು, ಪ್ರತಿ ವರ್ಷ ಇಬ್ಬರು ಚುಟುಕು ಸಾಹಿತಿಗಳಿಗೆ ಈ ದತ್ತಿ ಬಹುಮಾನವನ್ನು ನೀಡಲಾಗುವುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಹೇಳಿದ್ದಾರೆ.
► ಅತ್ಯುತ್ತಮ ಪ್ರಕಾಶನ ಪ್ರಶಸ್ತಿ - ಪಲ್ಲವ ಪ್ರಕಾಶನ, ಹೊಸಪೇಟೆ
► ಡಾ. ಎಂ. ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ – ಡಾ.ರಾಮೇಗೌಡ (ರಾಗೌ), ಮೈಸೂರು
► ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ - ಡಾ. ಶ್ರೀ ಚನ್ನವೀರ ಶಿವಾಚಾರ್ಯರು, ಬೀದರ್
► ಡಾ.ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ - ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ, ಮಂಗಳೂರು
► ಚುಟುಕು ಯೋಗಾಚಾರ್ಯ ಡಾ.ಎಂ.ಜಿ.ಆರ್. ಅರಸ್ ದತ್ತಿ ಬಹುಮಾನ - ಎ.ಈ. ವೀರಭದ್ರೇಗೌಡ ಆಂದಲೆ
► ಡಾ. ಅಂಬಾ ಎಂ.ಜಿ.ಆರ್. ಅರಸ್ ದತ್ತಿ ಬಹುಮಾನ - ವಿ. ಸೀತಾಲಕ್ಷ್ಮಿವರ್ಮ, ವಿಟ್ಲ ಅರಮನೆ ಅವರು ಭಾಜನರಾಗಿದ್ದಾರೆ . ಪ್ರಶಸ್ತಿ ಪ್ರದಾನ ದಿನಾಂಕವನ್ನು ಸದ್ಯದಲ್ಲಿಯೇ ತಿಳಿಸಲಾಗುವುದು ಎಂದು ಅಧ್ಯಕ್ಷರಾದ ಡಾ.ಮಾನಸ ಹೇಳಿದ್ದಾರೆ.