ಪ್ರಸಕ್ತ ವರ್ಷದ ವೃತ್ತಿಪರ ಕೋರ್ಸ್‍ಗಳ ಶುಲ್ಕ ಪ್ರಕಟ: ಶೇ.10ರಷ್ಟು ಹೆಚ್ಚಳ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿಪರ ಕೋರ್ಸ್‍ಗಳಾದ ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಕೋರ್ಸ್, ಬಿ.ಫಾರ್ಮ, ಫಾರ್ಮ ಡಿ, ಬಿ.ಎಸ್ಸಿ(ಅಗ್ರಿಕಲ್ಚರ್), ಬಿ.ವಿ.ಎಸ್ಸಿ., ಬಿ.ಎಫ್.ಎಸ್ಸಿ. ಕೋರ್ಸ್‍ಗಳ ಪ್ರಸಕ್ತ ವರ್ಷದ ಶುಲ್ಕವನ್ನು ಪ್ರಕಟ ಮಾಡಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿಕೊಂಡರೆ ಶೇ.10ರಷ್ಟು ಶುಲ್ಕವನ್ನು ಹೆಚ್ಚಳ ಮಾಡಿದೆ.
2025-26ನೇ ಸಾಲಿನಲ್ಲಿ ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಕೋರ್ಸ್‍ಗಳಿಗೆ ಅನ್ವಯಿಸಿದಂತೆ ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ 2ಎ, 2ಬಿ, 3ಎ, 3ಬಿ ಸೇರಿದಂತೆ ಸಾಮಾನ್ಯ ಅಭ್ಯರ್ಥಿಗಳಿಗೆ ವಾರ್ಷಿಕ ಶುಲ್ಕ 44,200 ರೂ. ಇದ್ದು, ಸೂಪರ್ ನ್ಯೂಮರಿ ಕೋಟಾದಲ್ಲಿ ಪ್ರವೇಶಾತಿ ಪಡೆಯುವವರಿಗೆ 21,360 ರೂ. ಕ್ಯಾಟಗರಿ-1 ವರ್ಗಕ್ಕೆ 23,590 ರೂ.ಗಳನ್ನು ನಿಗಧಿಪಡಿಸಲಾಗಿದೆ.
ವಿಶ್ವೇಶ್ವರಯ್ಯ ಇಂಜಿನಿಯರ್ ಕಾಲೇಜು ವಿಶ್ವ ವಿದ್ಯಾಲಯದಲ್ಲಿ(ಯುವಿಸಿಇ) 2ಎ, 2ಬಿ, 3ಎ, 3ಬಿ ಸೇರಿದಂತೆ ಸಾಮಾನ್ಯ ಅಭ್ಯರ್ಥಿಗಳಿಗೆ ವಾರ್ಷಿಕ ಶುಲ್ಕ 49,600 ರೂ. ಇದ್ದು, ಸೂಪರ್ ನ್ಯೂಮರಿ ಕೋಟಾದಲ್ಲಿ ಪ್ರವೇಶಾತಿ ಪಡೆಯುವವರಿಗೆ 21,360 ರೂ. ಮತ್ತು ಕ್ಯಾಟಗರಿ-1 ವರ್ಗಕ್ಕೆ 28,990 ರೂ.ಗಳನ್ನು ನಿಗಧಿಪಡಿಸಲಾಗಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ(ವಿಟಿಯು) ಘಟಕ ಕಾಲೇಜುಗಳಲ್ಲಿ 2ಎ, 2ಬಿ, 3ಎ, 3ಬಿ ಸೇರಿದಂತೆ ಸಾಮಾನ್ಯ ಅಭ್ಯರ್ಥಿಗಳಿಗೆ ವಾರ್ಷಿಕ ಶುಲ್ಕ 1,02,410 ರೂ. ಇದ್ದು, ಸೂಪರ್ ನ್ಯೂಮರಿ ಕೋಟಾದಲ್ಲಿ ಪ್ರವೇಶಾತಿ ಪಡೆಯುವವರಿಗೆ 21,360 ರೂ. ಮತ್ತು ಕ್ಯಾಟಗರಿ-1 ವರ್ಗಕ್ಕೆ 78,820 ರೂ.ಗಳನ್ನು ನಿಗಧಿಪಡಿಸಲಾಗಿದೆ.
ಖಾಸಗಿ ಕಾಲೇಜುಗಳಲ್ಲಿ 2ಎ, 2ಬಿ, 3ಎ, 3ಬಿ ಸೇರಿದಂತೆ ಸಾಮಾನ್ಯ ಅಭ್ಯರ್ಥಿಗಳಿಗೆ ವಾರ್ಷಿಕ ಶುಲ್ಕ 1,12,410 ರೂ. ಇದ್ದು, ಕ್ಯಾಟಗರಿ-1 ವರ್ಗಕ್ಕೆ 88,820 ರೂ.ಗಳನ್ನು ನಿಗಧಿಪಡಿಸಲಾಗಿದೆ. ವಾರ್ಷಿಕ ಆದಾಯ 10 ಲಕ್ಷ ರೂ.ಗಿಂತ ಕಡಿಮೆ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಎಲ್ಲ ಕಾಲೇಜುಗಳಲ್ಲಿ ಶುಲ್ಕ ವಿನಾಯಿತಿಯನ್ನು ನೀಡಿದ್ದು, ವಾರ್ಷಿಕ ಆದಾಯ 10 ಲಕ್ಷ ರೂ.ಗಿಂತ ಹೆಚ್ಚಿರುವವರಿಗೆ ಸಾಮಾನ್ಯ ಅಭ್ಯರ್ಥಿಗಳ ನಿಗಧಿಪಡಿಸಿದ ಶುಲ್ಕವನ್ನು ವಿಧಿಸಲಾಗಿದೆ.
ಬಿ.ಪಾರ್ಮಾ ಕೋರ್ಸ್‍ಗಳಿಗೆ ಸರಕಾರಿ ಕಾಲೇಜುಗಳಲ್ಲಿ 14,030 ರೂ. ಮತ್ತು ಖಾಸಗಿ ಕಾಲೇಜುಗಳಲ್ಲಿ 26 ಸಾವಿರ ರೂ.ಗಳನ್ನು ನಿಗದಿಪಡಿಸಲಾಗಿದೆ. ಫಾರ್ಮಾ-ಡಿ ಕೋರ್ಸ್‍ಗಳಿಗೆ ಖಾಸಗಿ ಕಾಲೇಜುಗಳಲ್ಲಿ 67 ಸಾವಿರ ರೂ.ಗಳನ್ನು ನಿಗಧಿಪಡಿಸಲಾಗಿದೆ. ವಾರ್ಷಿಕ ಆದಾಯ 10 ಲಕ್ಷ ರೂ.ಗಿಂತ ಕಡಿಮೆ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಎಲ್ಲ ಕಾಲೇಜುಗಳಲ್ಲಿ ಶುಲ್ಕ ವಿನಾಯಿತಿಯನ್ನು ನೀಡಿದೆ.
ಬಿ.ಎಸ್ಸಿ ಅಗ್ರಿಕಲ್ಚರ್ ಕೋರ್ಸ್‍ಗಳಿಗೆ ಸರಕಾರಿ ಕಾಲೇಜುಗಳಲ್ಲಿ 39,780 ರೂ., ಖಾಸಗಿ ಕಾಲೇಜುಗಳಲ್ಲಿ 60,500 ರೂ.ಗಳನ್ನು ನಿಗಧಿ ಮಾಡಲಾಗಿದೆ. ಬಿ.ವಿ.ಎಸ್ಸಿ(ವೆಟರ್ನರಿ) ಕೋರ್ಸ್‍ಗಳಿಗೆ 76,380 ರೂ. ಮತ್ತು ಬಿ.ಎಫ್.ಎಸ್ಸಿ(ಫಿಶರಿಸ್ ಮತ್ತು ಡೈರಿ ಸೈನ್ಸ್) ಕೋರ್ಸ್‍ಗಳಿಗೆ 39,605 ರೂ.ಗಳನ್ನು ನಿಗಧಿಪಡಿಸಲಾಗಿದೆ.