ಪ್ರವಾದಿ ಕುರಿತು ದ್ವೇಷ ಭಾಷಣ: ಯತಿ ನರಸಿಂಗಾನಂದ ವಿರುದ್ಧ ಬೆಂಗಳೂರಿನಲ್ಲಿ ಎಫ್‍ಐಆರ್ ದಾಖಲು
Update: 2024-10-15 18:30 IST
ಯತಿ ನರಸಿಂಗಾನಂದ (Photo: PTI)
ಬೆಂಗಳೂರು: ಉತ್ತರಪ್ರದೇಶದ ಗಾಝಿಯಾಬಾದ್‍ನ ಲೋಹಿಯಾ ನಗರದಲ್ಲಿ ಸೆ.29ರಂದು ಇಸ್ಲಾಮ್ ಧರ್ಮ ಹಾಗೂ ಪ್ರವಾದಿ ಮುಹಮ್ಮದ್(ಸ) ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಯತಿ ನರಸಿಂಗಾನಂದ ವಿರುದ್ಧ ಜಮಿಯತ್ ಉಲಮಾ ಕರ್ನಾಟಕ ನೀಡಿದ ದೂರಿನ ಹಿನ್ನೆಲೆಯಲ್ಲಿ ಭಾರತೀನಗರ ಠಾಣಾ ಪೊಲೀಸರು ಎಫ್‍ಐಆರ್ ದಾಖಲು ಮಾಡಿದ್ದಾರೆ.
ಜಮಿಯತ್ ಉಲಮಾ ಕರ್ನಾಟಕದ ಉಪಾಧ್ಯಕ್ಷ ಮೌಲಾನಾ ಝೈನುಲ್ ಆಬಿದೀನ್, ಖಜಾಂಚಿ ಮುಹಮ್ಮದ್ ತಫ್ಹೀಮ್ ಮಾರೂಫ್ ಹಾಗೂ ಮುಹಮ್ಮದ್ ರಿಝ್ವಾನ್ ಬದರ್ ನಿಯೋಗದಲ್ಲಿ ತೆರಳಿ ಯತಿ ನರಸಿಂಗಾನಂದ ವಿರುದ್ಧ ದೂರು ಸಲ್ಲಿಸಿದರು.