×
Ad

ಹೃದಯಾಘಾತ; ಆಟೋ ಚಾಲಕ ಮೃತ್ಯು

Update: 2023-08-22 23:30 IST

ಬೆಂಗಳೂರು, ಆ.22: ಆಟೋ ಚಾಲನೆಯ ವೇಳೆಯಲ್ಲಿ ಚಾಲಕನಿಗೆ ಎದೆನೋವು ಕಾಣಿಸಿಕೊಂಡು, ದಿಢೀರ್ ಕುಸಿದು ಬಿದ್ದು ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಸಂಪಂಗಿರಾಮನಗರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮೃತಪಟ್ಟ ಆಟೋ ಚಾಲಕನನ್ನು ತಿಮ್ಮೇಶ್(58) ಎಂದು ಗುರುತಿಸಲಾಗಿದೆ. ಸಂಪಂಗಿರಾಮನಗರದ ಸಮೀಪದಲ್ಲಿ ಆಟೋ ನಿಲ್ಲಿಸಿ, ಟೀ ಕುಡಿಯಲು ತೆರಳಿದ ಸಂದರ್ಭದಲ್ಲಿ ಚಾಲಕ ತಿಮ್ಮೇಶ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಎದೆ ಉಜ್ಜಿಕೊಂಡು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ.

ಈ ವೇಳೆಯಲ್ಲಿ ಸ್ಥಳೀಯರು ಚಾಲಕ ತಿಮ್ಮೇಶ್ ಅವರ ಎದೆಯ ಭಾಗವನ್ನು ಉಜ್ಜಿ ಬದುಕಿಸುವ ಪ್ರಯತ್ನ ಮಾಡಿದ್ದಾರೆ. ಆದರೂ ಚಾಲಕ ತಿಮ್ಮೇಶ್ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಘಟನೆ ಸಂಬಂಧ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮೃತದೇಹವನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News