ಮಾಧ್ಯಮಗಳ ಮುಂದೆ ಹೇಳಿದಂತೆ ಸಿಎಂಗೂ ಹೇಳುವೆ: ಶಾಸಕ ಬಿ.ಆರ್. ಪಾಟೀಲ್
Update: 2025-06-24 22:21 IST
ಬೆಂಗಳೂರು: ನಾನು ಮಾಧ್ಯಮದವರ ಮುಂದೆ ಏನು ಹೇಳಿಕೆ ಕೊಟ್ಟಿದ್ದೇನೆಯೋ ಅದನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಹೇಳುವೆ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಆರ್.ಪಾಟೀಲ್ ಹೇಳಿದ್ದಾರೆ.
ಮಂಗಳವಾರ ವಿಜಯನಗರದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಗಳ ಭೇಟಿಗೆ ಹೋಗುತ್ತಿದ್ದೇನೆ. ನನ್ನದು ಏನು ಬೇಡಿಕೆ ಇಲ್ಲ. ನಾನು ಮಾಧ್ಯಮದವರ ಮುಂದೆ ಏನು ಹೇಳಿಕೆ ಕೊಟ್ಟಿದ್ದೇನೆ, ಅದನ್ನೆ ಸಿಎಂಗೆ ಹೇಳುವೆ ಎಂದು ತಿಳಿಸಿದರು.
ಆರ್.ವಿ.ದೇಶಪಾಂಡೆ ಮತ್ತು ಬಸವರಾಜ ರಾಯರೆಡ್ಡಿ ಸರಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಸಂಸಾರ ಎಂದ ಮೇಲೆ ಗಂಡ-ಹೆಂಡತಿ ಜಗಳ ಇದ್ದೇ ಇರುತ್ತದೆ, ಅದೇ ರೀತಿ ಇದು ಕೂಡ ಎಂದು ನುಡಿದರು.