KKRDB ಅಧ್ಯಕ್ಷರಾಗಿ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ನೇಮಕ
Update: 2023-08-10 20:02 IST
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (KKRDB) ಅಧ್ಯಕ್ಷರಾಗಿ ವಿಧಾನ ಸಭೆ ಕ್ಷೇತ್ರದ ಶಾಸಕರಾದ ಡಾ. ಅಜಯಸಿಂಗ್ ಅವರನ್ನು ಗುರುವಾರ ರಾಜ್ಯ ಸರಕಾರ ನೇಮಕ ಮಾಡಿದೆ.
ಜೊತೆಗ, 11 ಸದಸ್ಯರನ್ನು ಒಂದು ವರ್ಷದ ಅವಧಿಗೆ ನೇಮಕ ಮಾಡಿ ರಾಜ್ಯ ಸರಕಾರ ಉಪಕಾರ್ಯದರ್ಶಿ ಎಡಿಬಿ ವಿಭಾಗ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಕ ಇಲಾಖೆಯ ಪದನಿಮಿತ್ತ ನಿರ್ದೇಶಕರಾದ ಡಿ ಚಂದ್ರಶೇಖರಯ್ಯ ತಕ್ಷಣದಿಂದ ಜಾರಿಗೆ ಬರಲು ಆದೇಶಿಸಿದ್ದಾರೆ.