×
Ad

ಕೇರಳದಲ್ಲಿ ನಿಪಾ ವೈರಸ್ ಪತ್ತೆ : ಮಲಪ್ಪುರಂ ಜಿಲ್ಲೆಗೆ ಅನವಶ್ಯಕವಾಗಿ ಪ್ರಯಾಣ ಮಾಡದಂತೆ ಸೂಚನೆ

Update: 2024-07-25 20:47 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಿಪಾ ವೈರಸ್ ಪ್ರಕರಣ ಪತ್ತೆಯಾಗಿದ್ದು, ಕೇರಳದ ರೋಗ ಪೀಡಿತ ಪ್ರದೇಶವನ್ನು ನಿಪಾ ವೈರಸ್ ಸೋಂಕಿನಿಂದ ಸುರಕ್ಷಿತ ಎಂದು ಘೋಷಿಸುವವರೆಗೆ ಮಲಪುರಂ ಜಿಲ್ಲೆಗೆ ಅನವಶ್ಯಕವಾಗಿ ಪ್ರಯಾಣ ಮಾಡದಂತೆ ಸರಕಾರವು ತಿಳಿಸಿದೆ.

ಗುರುವಾರ ಆರೋಗ್ಯ ಇಲಾಖೆಯು ಪ್ರಕಟನೆ ಹೊರಡಿಸಿದ್ದು, ಮಲಪ್ಪುರಂನಲ್ಲಿ ನಿಪಾ ವೈರಸ್ ಪೀಡಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರನ್ನು ಪರೀಕ್ಷೆಗೊಳಪಡಿಸಿದ್ದು, ಯಾರಲ್ಲೂ ವೈರಸ್ ಪತ್ತೆಯಾಗಿಲ್ಲ. ಹೀಗಾಗಿ ಈ ವೈರಸ್ ಮನುಷ್ಯನಿಂದ ಮನುಷ್ಯನಿಗೆ ಹರಡುವ ಸಾಧ್ಯತೆ ಕಡಿಮೆ ಇದ್ದು, ಈ ಕ್ಷಣದಲ್ಲಿ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News