ತನಿಖೆ ಮಾಡಿದರೆ ಪ್ರಜ್ವಲ್‌ನಂತೆ ಪ್ರತಾಪ್ ಸಿಂಹ ಕೂಡ ಜೈಲಿಗೆ ಹೋಗಬೇಕಾಗುತ್ತದೆ : ಎಂ.ಲಕ್ಷ್ಮಣ್
Update: 2025-08-06 17:40 IST
ಎಂ.ಲಕ್ಷ್ಮಣ್/ಪ್ರತಾಪ್ ಸಿಂಹ
ಬೆಂಗಳೂರು : ʼಸಂಸತ್‌ನಲ್ಲಿ ನಡೆದ ಹೊಗೆ ಬಾಂಬ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಮೊಬೈಲ್ ಅನ್ನು ಸೀಝ್ ಮಾಡಲಾಗಿತ್ತು. ಅವರ ಮೊಬೈಲನ್ನು ಎಸ್ಐಟಿ ತನಿಖೆಗೆ ವಹಿಸಿದರೆ ಪ್ರಜ್ವಲ್ ರೇವಣ್ಣ ಜೈಲಿಗೆ ಹೋದಂತೆ ಪ್ರತಾಪ್ ಸಿಂಹ ಕೂಡ ಜೈಲಿಗೆ ಹೋಗಲಿದ್ದಾರೆʼ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಾಪ್ ಸಿಂಹ ಮೊಬೈಲ್‌ನಲ್ಲಿ ನಗ್ನ ಚಿತ್ರಗಳು, ನಗ್ನ ವೀಡಿಯೋಗಳು ಇವೆ. ಇದನ್ನು ನೋಡಿದ ಅಮಿತ್ ಶಾ ಅವರೇ ದಂಗಾಗಿ ಹೋಗಿದ್ದಾರೆ. ನನ್ನ ಬಳಿ ಈ ಬಗ್ಗೆ ಆಧಾರಗಳಿವೆ ಎಂದು ತಿಳಿಸಿದರು.
ಪ್ರಜ್ವಲ್ ರೇವಣ್ಣ ತರಹ ಪ್ರತಾಪ್ ಸಿಂಹ ಅವರ ವೀಡಿಯೋಗಳು ಇವೆ. ಅಂತಹ ವಿಡಿಯೋ ಇರುವುದಕ್ಕೆ ಗೃಹ ಸಚಿವರು ಪ್ರತಾಪ್ ಸಿಂಹ ಮೊಬೈಲ್ ಸೀಝ್ ಮಾಡಿಸಿದರು. ಪ್ರತಾಪ್ ಸಿಂಹ ಅಶ್ಲೀಲ ವಿಡಿಯೋಗಳು ನನ್ನ ಮೊಬೈಲ್‌ನಲ್ಲೇ ಇವೆ ಎಂದು ಗಂಭೀರ ಆರೋಪ ಮಾಡಿದರು.