×
Ad

ಹದಿಹರೆಯದ ಯುವತಿಯರ ಮೇಲೆ ಅತ್ಯಾಚಾರ; ಪ್ರಕರಣ ದಾಖಲು

Update: 2023-08-01 08:18 IST

ಜೈಪುರ: ಹದಿಹರೆಯದ ಇಬ್ಬರು ಯುವತಿಯರ ಮೇಲೆ ಅವರ ತಂದೆಯ ಸಹೋದ್ಯೋಗಿಗಳೇ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿರುವ ಬಗ್ಗೆ ವರದಿಯಾಗಿದೆ.

ಯುವತಿಯರ ತಂದೆ ಎನ್‍ಇಬಿ ಠಾಣೆಯಲ್ಲಿ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾಗಿರುವ ಇಬ್ಬರು ಕ್ರಮವಾಗಿ 15 ಮತ್ತು 13 ವರ್ಷ ವಯಸ್ಸಿನವರಾಗಿದ್ದು, ಸಂತ್ರಸ್ತೆಯರಿಬ್ಬರೂ ಗರ್ಭಿಣಿಯರಾಗಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಗಳನ್ನು ಸಪ್ಪಿ ಹಾಗೂ ಸುಭಾನ್ ಎಂದು ಗುರುತಿಸಲಾಗಿದ್ದು, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಂತ್ರಸ್ತ ಯುವತಿಗೆ ಹೊಟ್ಟೆನೋವು ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೋಷಕರು ವೈದ್ಯರ ಬಳಿಗೆ ಕರೆದೊಯ್ದಾಗ, ಆಕೆ ಏಳೂವರೆ ತಿಂಗಳ ಗರ್ಭಿಣಿ ಎಂಬ ಅಂಶವನ್ನು ವೈದ್ಯರು ದೃಢಪಡಿಸಿದರು. ಈ ಬಗ್ಗೆ ಪೋಷಕರು ಪ್ರಶ್ನಿಸಿದಾಗ, ಸಪ್ಪಿ ಹಾಗೂ ಸುಭಾನ್ ಅತ್ಯಾಚಾರ ಎಸಗಿದ್ದಾಗಿ ಯುವತಿ ಬಹಿರಂಗಪಡಿಸಿದಳು. ತಂಗಿಯ ಮೇಲೂ ಇವರು ಅತ್ಯಾಚಾರ ಎಸಗಿದ್ದಾಗಿ ಯುವತಿ ಮಾಹಿತಿ ನೀಡಿದಳು ಎಂದು ಪೊಲೀಸರು ವಿವರಿಸಿದ್ದಾರೆ.

ಈ ವಿಷಯವನ್ನು ಬಹಿರಂಗಪಡಿಸಿದರೆ ಹತ್ಯೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡು ಸಂತ್ರಸ್ತ ಯುವತಿಯನ್ನು ವೈದ್ಯಕೀಯ ತಪಾಸಣೆಗೆ ಗುರಿಪಡಿಸಿದಾಗ ಇಬ್ಬರೂ ಗರ್ಭಿಣಿಯರು ಎಂಬ ಅಂಶ ದೃಢಪಟ್ಟಿದೆ ಎಂದು ಅಲ್ವಾರ್ ಎಸ್ಪಿ ಆನಂದ್ ಶರ್ಮಾ ಹೇಳಿದ್ದಾರೆ. ತಂಗಿ ಎರಡೂವರೆ ತಿಂಗಳ ಗರ್ಭಿಣಿ. ಸಂತ್ರಸ್ತ ಯುವತಿಯರ ತಂದೆ ಕೆಲಸ ಮಾಡುವ ಇಟ್ಟಿಗೆ ಫ್ಯಾಕ್ಟರಿಯ ಬಳಿ ಇವರ ಮನೆ ಇತ್ತು ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News