×
Ad

ಸಿಎಂ ರಾಜೀನಾಮೆ ಗಡುವು ನಿಗದಿಮಾಡಲು ವಿಜಯೇಂದ್ರ ಯಾರು?: ಮಧು ಬಂಗಾರಪ್ಪ ಪ್ರಶ್ನೆ

Update: 2024-10-09 22:09 IST

ಬೆಂಗಳೂರು: ರಾಜೀನಾಮೆ ವಿಚಾರ ಮುಖ್ಯಮಂತ್ರಿ ಹಾಗೂ ಹೈಕಮಾಂಡ್‌ಗೆ ಬಿಟ್ಟದ್ದು. ರಾಜೀನಾಮೆಗೆ ಗಡುವು ನಿಗದಿಮಾಡಲು ವಿಜಯೇಂದ್ರ ಯಾರು? ಅವರೇನು ಕಾಂಗ್ರೆಸ್ ಪಕ್ಷದವರಾ? ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೀಡಿರುವ ಹೇಳಿಕೆ ಮೂರ್ಖತನದ್ದು. ಅಷ್ಟಕ್ಕು ರಾಜ್ಯದಲ್ಲಿ ಜನಪರವಾದ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯ ಅವರು ರಾಜೀನಾಮೆ ಏಕೆ ನೀಡಬೇಕು ಎಂದರು.

ಕಾಂಗ್ರೆಸ್‌ನಲ್ಲಿ ಗೆದ್ದ ಪ್ರಮುಖ ನಾಯಕರ ಮೇಲೆ ಈಡಿ, ಐಟಿ ದಾಳಿ ಮೂಲಕ ಬೆದರಿಸಿ ರಾಜೀನಾಮೆ ಕೊಡಿಸುವುದು ಬಿಜೆಪಿಯ ಒಂದು ದೊಡ್ಡ ರೋಗವಾಗಿದ್ದು, ಭ್ರಷ್ಟರೆಲ್ಲ ಬಿಜೆಪಿ ಪಕ್ಷಕ್ಕೆ ಹೋದ ತಕ್ಷಣ ಕೇಸುಗಳೆಲ್ಲಾ ಮುಕ್ತಾಯವಾಗುತ್ತವೆ. ಇದೇ ಬಿಜೆಪಿಯ ವಾರ್ಷಿಂಗ್ ಮಷಿನ್ ಗಿಮಿಕ್. ಸಿದ್ದರಾಮಯ್ಯ ಅವರ ಮೇಲೂ ಈಗ ಅದೇ ಪ್ರಯೋಗ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News